ಮನೆಯವರು ಅಪಾಯದಿಂದ ಪಾರು
ಜಯನಗರ: ಕುದ್ಪಾಜೆ ಸಮೀಪ ಅ. 3 ರಂದು ಸಂಜೆ ವೇಳೆ ಬಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯವರು ಅಂಗಡಿಗೆ ಸಾಮಾನು ತರಲು ಹೋಗಿದ್ದ ಕಾರಣ ಅಪಾಯದಿಂದ ಪಾರಾದ ಘಟನೆ ತಡವಾಗಿ ತಿಳಿದು ಬಂದಿದೆ.
ಕುದ್ಪಾಜೆ ನಿವಾಸಿ ಕರಿಯ ಎಂಬುವವರ ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಈ ಸಂಧರ್ಭ ಮನೆಯ ಮಾಡಿನ ಸೀಟುಗಳು ಮುರಿದು ಬಿದ್ದಿದೆ. ಘಟನೆಯಿಂದ ಬಾರಿ ನಷ್ಟ ಉಂಟಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.