ಅಕರ್ಷಕ ವಾಹನ ಜಾಥಾ ಹಾರಾರ್ಪಣೆಯೊಂದಿಗೆ ಅಭಿನಂದನೆ
ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಗರುಡ ಯುವಕ ಮಂಡಲ, ಮಯೂರಿ ಯುವತಿ ಮಂಡಲ,ವಿಶ್ವ ಹಿಂದೂ ಪರಿಷತ್ ಬಜರಂಗದಳ, ಪಂಚಶ್ರೀ ಅಕ್ಕೋಜಿಪಾಲ್, ವಜ್ರಕಾಯ ಶಾಖೆ ಹಾಗೂ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಕಳೆದ 39 ವರ್ಷಗಳಿಂದ
ಬಿ .ಎಸ್. ಎಫ್ ಯೋಧರಾಗಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಯೋಧ ಚೊಕ್ಕಾಡಿ ನಡುಗಲ್ಲು ದಿ.ಬಾಬು ಗೌಡ ಮತ್ತು ದಿ.ಸೀತಮ್ಮ ದಂಪತಿಯ ಸುಪುತ್ರ ಬಾಲಕೃಷ್ಣ ಎನ್.ಬಿ ಯವರನ್ನು ಊರ ಬಂಧು ಮಿತ್ರರು ಆ.4 ರಂದು ಅದ್ದೂರಿಯಾಗಿ ಸ್ವಾಗತಿಸಿದರು.
ನಿವೃತ್ತಿಯಾಗಿ ಸುಳ್ಯಕ್ಕೆ ಆಗಮಿಸಿದ ಅವರನ್ನು ದ.ಕ ಮತ್ತು ಉಡುಪಿ ಜಿಲ್ಲೆಯ ಪ್ಯಾರಾ ಮಿಲಿಟರಿ ಅಸೋಸಿಯೇಷನ್ ಜತೆ ಕಾರ್ಯದರ್ಶಿ ನಿವೃತ್ತ ಸಿ.ಆರ್.ಪಿ.ಎಫ್ ಆನಂದ ಬಿ.ಎಂ ರವರು ಸ್ವಾಗತಿಸಿದರು.
ಬಳಿಕ ತೆರಳಿದ ಅವರನ್ನು ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲಿನಲ್ಲಿ ಹಾರಾರ್ಪಣೆ ಮಾಡಿ ಸ್ವಾಗತಿಸಿ
ಹೂವಿನಿಂದ ಅಲಂಕರಿಸಿದ ತೆರದ ವಾಹನದಲ್ಲಿ ನಿವೃತ್ತ ಯೋಧ ಬಾಲಕೃಷ್ಣ ಎನ್.ಬಿ ಯವರನ್ನು ಅದ್ದೂರಿಯಾಗಿ ವಾಹನ ಜಾಥಾದೊಂದಿಗೆ ಚೊಕ್ಕಾಡಿಗೆ ಕರೆ ತಂದು ಅಲ್ಲಿಂದ ಹಿಂತಿರುಗಿ ಅಜ್ಜನಗದ್ದೆಯಾಗಿ ಕುಕ್ಕುಜಡ್ಕ ತನಕ ಜಾಥಾವು ಸಾಗಿ ಬಂತು.
ಚೊಕ್ಕಾಡಿ ಪೇಟೆಯಲ್ಲಿ ಮತ್ತು ಕುಕ್ಕುಜಡ್ಕ ಪೇಟೆಯಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಊರಿನವರ ಪರವಾಗಿ
ನಿವೃತ್ತ ಯೋಧ ಬಾಲಕೃಷ್ಣ ಎನ್.ಬಿ ಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ಮನ್ಮಥ ಹಾಗೂ ಪ್ರಗತಿಪರ ಕೃಷಿಕ ಚಿನ್ನಪ್ಪ ಗೌಡ ರವರು ಅಭಿನಂದನಾ ಮಾತುಗಳನ್ನಾಡಿದರು.
ಜಾಥಾದಲ್ಲಿ ಭಾರತ ಮಾತೆಯ ಭಾವಚಿತ್ರವಿದ್ದ ವಾಹನ ಹಾಗೂ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂತು. ರಾಷ್ಟ್ರ ಧ್ವಜ
ಕೈಯಲ್ಲಿ ಹಿಡಿದ ಯುವಕ ಯುವತಿಯರು ಊರಿನವರು ಭಾರತ ಮಾತಾಕಿಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು.
ಈ ಸಂದರ್ಭದಲ್ಲಿ ಯೋಧರ ಪತ್ನಿ ಜಯಮಾಲಾ ಮತ್ತು ಪುತ್ರಿಯರಾದ ಅಶ್ವಿನಿ ಎನ್.ಬಿ, ಅನನ್ಯ ಎನ್.ಬಿ ಹಾಗೂ ಸಹೋದರರು, ಬಂಧು ವರ್ಗದವರು, ಮಿತ್ರರು ಹಾಗೂ ಸ್ಥಳೀಯ
ಸಂಘ ಸಂಸ್ಥೆಗಳ ಪದಾಧಿಕಾರಿಗಳು
ಮತ್ತು ಸದಸ್ಯರು ಭಾಗವಹಿಸಿದರು.