ಮಧ್ಯರಾತ್ರಿ ವೇಳೆ ರಸ್ತೆ ಬದಿಯ ಮೋರಿಗೆ ಬೈಕ್ ಢಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಅರಣ್ಯ ಇಲಾಖಾ ಕಛೇರಿ ಬಳಿ ಆ.4ರಂದು ಸಂಭವಿಸಿದೆ.
ಮೈಸೂರಿನಿಂದ ಧರ್ಮಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಮೈಸೂರು ಮೂಲದ ಇಬ್ಬರು ಯುವಕರು ರಾತ್ರಿ ವೇಳೆ ಕೊಡಗು ಸಂಪಾಜೆಯ ಅರಣ್ಯ ಇಲಾಖಾ ಕಛೇರಿ ಬಳಿ ಮುಖ್ಯರಸ್ತೆ ಬದಿಯಲ್ಲಿದ್ದ ಮೋರಿಗೆ ಬೈಕ್ ಢಿಕ್ಕಿ ಹೊಡೆದಿದ್ದು, ಪಕ್ಕದ ಚರಂಡಿಗೆ ಎಸೆಯಲ್ಪಟ್ಟು ಸ್ಥಳದಲೇ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.