ಅಯ್ಯನಕಟ್ಟೆ ನಮ್ಮ ಆರೋಗ್ಯ ಧಾಮದಲ್ಲಿ ಉಚಿತ ಅಸ್ತಮಾ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ

0

ಡಾ‌. ಕಿಶನ್ ರಾವ್ ಬಾಳಿಲರವರ
ಅಯ್ಯನಕಟ್ಟೆಯ ಗೋಕುಲಂ ಕಾಂಪ್ಲೆಕ್ಸ್ ನಲ್ಲಿರುವ ನಮ್ಮ ಆರೋಗ್ಯ ಧಾಮದಲ್ಲಿ ಉಚಿತ ಅಸ್ತಮಾ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ಮತ್ತು ನೆಬ್ಯುಲೈಸರ್ ವಿತರಣೆ ಆ. 4ರಂದು ನಡೆಯಿತು.


ಶಿಬಿರದಲ್ಲಿ ತಜ್ಞ ವೈದ್ಯರಾದ ಡಾl ನರಸಿಂಹ ಶಾಸ್ತ್ರಿ ಮಂಗಳೂರು ಇವರು ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಉಚಿತವಾಗಿ ಶ್ವಾಸಕೋಶದ ಪರೀಕ್ಷೆ (Spirometry ) ಮತ್ತು ಅಗತ್ಯವಿದ್ದ ರೋಗಿಗಳಿಗೆ Nebulization Machine ಹಾಗೂ ಇನ್ನಿತರ ಔಷಧಿಗಳನ್ನು ವಿತರಿಸಲಾಯಿತು.
ಉಸಿರಾಟದ ಸಮಸ್ಯೆ ಇರುವ ಸುಮಾರು 40 ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು. ದೀಪಕ್ ಪರೀಕ್ಷೆ ನಡೆಸಿದರು. ನಮ್ಮ ಆರೋಗ್ಯ ಧಾಮದ ಸಿಬ್ಬಂದಿಗಳು ಸಹಕರಿಸಿದರು.