ಅಮರ ಸಂಘಟನಾ ಸಮಿತಿ ವತಿಯಿಂದ ಪೈಲಾರಿನಲ್ಲಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಕೊಡೆ ವಿತರಣೆ

0

ಗ್ರಾಮದ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ

ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಪೈಲಾರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್, ಕೊಡೆ ವಿತರಣೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವು ಆ. 4 ರಂದು ಪೈಲಾರು ಶಾಲಾ ವಠಾರದಲ್ಲಿ ನಡೆಯಿತು.

ಅಮರ ಸಂಘಟನಾ ಸಮಿತಿ ಅಧ್ಯಕ್ಷ ಸಾತ್ವಿಕ್ ಮಡಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಸೈನಿಕ‌ ಸುಬೇದಾರ್ ರಘುಪತಿ ಯು.ಎಂ. ಉದ್ಘಾಟಿಸಿದರು.

ಸೈನ್ಯದ ತನ್ನ ಅನುಭವಗಳನ್ನು ಮತ್ತು ಕಾರ್ಗಿಲ್ ಕದನದ ಮಾಹಿತಿ ನೀಡಿದ ರಘುಪತಿಯವರು, ಯೋಧರಿಂದ ಸ್ಪೂರ್ತಿ ಪಡೆದು ವಿದ್ಯಾರ್ಥಿಗಳು ರಾಷ್ಟ್ರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಗ್ರಂಥಾಲಯ ನೌಕರರ ಸಂಘದ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಕಣೆಮರಡ್ಕ ಪ್ರಧಾನ ಭಾಷಣ ಮಾಡಿದರು.‌

ರಘುಪತಿ ಯು.ಎಂ. ಹಾಗೂ ಗ್ರಾಮದ ನಿವೃತ್ತ ಸೈನಿಕರಾದ ಸಂಜೀವ ಮದುವೆಗದ್ದೆ, ಗಂಗಾಧರ ಬಾಕಿಲಾಡಿ, ಶಿವರಾಮ ಗೌಡ ಎಸ್. ಅವರನ್ನು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಸನ್ಮಾನಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಒಕ್ಕೂಟದ ಪೈಲಾರು ಘಟಕದ ಅಧ್ಯಕ್ಷ ದಯಾನಂದ ಗುಡ್ಡೆಮನೆ, ಪ್ರಗತಿಪರ ಕೃಷಿಕ ಜಯಶಿವ ಮಡಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ರಸಾದ್ ಮಾಡಬಾಕಿಲು, ಜಯಪ್ರಕಾಶ್ ದೊಡ್ಡಿಹಿತ್ಲು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ದೇವಕಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಪ್ರದೀಪ್ ಬೊಳ್ಳೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಸುಧೀರ್ ದೇವ ವಂದಿಸಿದರು. ಗಾಯಕ ಹರ್ಷಿತ್ ಮಿತ್ತಡ್ಕ ಕಾರ್ಯಕ್ರಮ‌ ನಿರೂಪಿಸಿದರು.