ಕೊಡಗು ಸಂಪಾಜೆ: ರಬ್ಬರ್ ಸ್ಮೋಕ್ ಹೌಸಿಗೆ ಬೆಂಕಿ

0

ರಬ್ಬರ್ ಸ್ಕ್ರಾಪ್ – ಶೀಟ್ ಸೇರಿದಂತೆ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿ – ಅಪಾರ ನಷ್ಟ

ರಬ್ಬರ್ ಸ್ಮೋಕ್ ಹೌಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ರಬ್ಬರ್ ಸ್ಕ್ರಾಪ್, ಶೀಟು ಸೇರಿದಂತೆ ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಕೊಡಗು ಸಂಪಾಜೆಯಲ್ಲಿ ಆ.5ರಂದು ಬೆಳಿಗ್ಗೆ ಸಂಭವಿಸಿದೆ.

ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ ಅವರ ಮನೆಯ ಸಮೀಪದಲ್ಲಿರುವ ರಬ್ಬರ್ ಸ್ಮೋಕ್ ಹೌಸ್ ನಲ್ಲಿ ಬೆಳಿಗ್ಗೆ ಹತ್ತು ಗಂಟೆ ವೇಳೆ ಆಕಸ್ಮಿಕವಾಗಿ ಬೆಂಕಿ ರಬ್ಬರ್ ಸ್ಕ್ರಾಪ್ ಹಾಗೂ ಶೀಟುಗಳಿಗೆ ತಗುಲಿದ್ದು, ಸ್ಮೋಕ್ ಹೌಸ್ ಪೆಟ್ಟಿಗೆಗೆ ಹಾನಿಯಾಗಿದ್ದು, ಸುಮಾರು ಐವತ್ತು ಸಾವಿರ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಕೂಡಲೇ ರಮಾದೇವಿ ಕಳಗಿ ಅವರು ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಗ್ರಾ.ಪಂ. ಸದಸ್ಯ ನವೀನ, ರಬ್ಬರ್ ಟ್ಯಾಪರ್ ಗಳು ಸೇರಿ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.