ಯೋಗಾಸನದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಸೋನಾ ಅಡ್ಕಾರು ರವರಿಗೆ ಹಲವು ಪ್ರಶಸ್ತಿಗಳು ಲಭಿಸಿದೆ.
ಇತ್ತೀಚೆಗೆ ಯೋಗ ಸ್ಪೋರ್ಟ್ಸ್ ಫೌಂಡೇಶನ್ (ರಿ) ಮೈಸೂರು ಇವರಿಂದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 11ವರ್ಷ ವಯೋಮಿತಿಯ ಟ್ರಡೀಷನಲ್ ಯೋಗಾಸನದಲ್ಲಿ ದ್ವಿತೀಯ ಸ್ಥಾನ,
ಪತಂಜಲಿ ಯೋಗಕೇಂದ್ರ ನಂದಿನಿ ಲೇಔಟ್ ಬೆಂಗಳೂರು ಇದರ ವತಿಯಿಂದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಅಂತರ್ ಶಾಲಾ ಮತ್ತು ಕಾಲೇಜು ಹಾಗೂ ರಾಷ್ಟ್ರಮಟ್ಟದ 5 ಹಾಗೂ 6ನೇ ತರಗತಿ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಪಂಚಮ ಸ್ಥಾನ, ಕೋರಮಂಗಲ ಇಂಡೋರ್ ಸ್ಟೇಡಿಯಂ ಬೆಂಗಳೂರು ಇಲ್ಲಿ SGS ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅವರು ನಡೆಸಿದ ನ್ಯಾಷನಲ್ ಯೋಗಾಸನದಲ್ಲಿ 8 ರಿಂದ 12 ವರ್ಷದ ಬಾಲಕಿಯರ ಓನ್ ಚಾಯಿಸ್ ಯೋಗಾಸನದಲ್ಲಿ ಚತುರ್ಥ ಸ್ಥಾನವನ್ನು ಪಡೆದಿರುತ್ತಾಳೆ.
ಈಕೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಮನೆತನದ ಶರತ್ ಅಡ್ಕಾರು ಹಾಗೂ ಶೋಭಾ ಶರತ್ ಅಡ್ಕಾರು ಇವರ ಸುಪುತ್ರಿ.
ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದು, ಯೋಗ ಗುರು ಸಂತೋಷ್ ಮುಂಡುಕಜೆ ಇವರ ಬಳಿ ಯೋಗಾಭ್ಯಾಸ ಮಾಡುತ್ತಿದ್ದಾಳೆ.