ವಿವಿಧ ಅಭಿವೃದ್ಧಿ ಕೆಲಸಗಳು ಮತ್ತು ಕುಂದುಕೊರತೆಗಳ ಕುರಿತು ಚರ್ಚೆ
ಗ್ರಾಮದಲ್ಲಿ ಆಗಬೇಕಿರುವ ವಿವಿಧ ಅಭಿವೃದ್ಧಿ ಕೆಲಸಗಳು ಹಾಗೂ ಕುಂದುಕೊರತೆಗಳ ಕುರಿತು ಚರ್ಚೆ ನಡೆದ ಘಟನೆ ಪೆರಾಜೆ ಗ್ರಾಮಸಭೆಯಿಂದ ವರದಿಯಾಗಿದೆ.
ಪೆರಾಜೆ ಗ್ರಾಮ ಪಂಚಾಯತಿಯ 2024 -25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ಆ. 6ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ನೋಡೆಲ್ ಅಧಿಕಾರಿಯಾಗಿ ಹೇಮಂತ್ ಕುಮಾರ್ ಅವರು ಉಪಸ್ಥಿತರಿದ್ದರು.
ಬಳಿಕ ವಯನಾಡಿನಲ್ಲಿ ಮೃತ ಪಟ್ಟವರಿಗೆ ಮತ್ತು ಕುಟುಂಬದವರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಕುಮಾರ್ ಅವರು ಕಳೆದ ವರ್ಷದ ಗ್ರಾಂ.ಪಂ ನ ಅಭಿವೃದ್ಧಿಯ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆ ಸೌಲಭ್ಯ ಮತ್ತು ಪ್ರಯೋಜನ ಮತ್ತು ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಕೇಂದ್ರ ಸೌಲಭ್ಯ, ಕೋಳಿಕ್ಕಮಲೆಗೆ ಪ್ರವಾಸಿಗರ ಸಂಚಾರ ನಿಷೇಧ, ಡೆಂಗ್ಯೂ, ಪಶುಪಾಲನಾ ಅಭಿವೃದ್ಧಿ, ಕೆ.ಪಿ.ಎಸ್. ಶಾಲೆಯ ಸ್ಥಾಪನೆ ಅಭಿವೃದ್ದಿ, ಶಿಕ್ಷಕರ ಕೊರತೆ, ಸರ್ವೆ ನಂಬರ್ ತಿದ್ದುಪಡಿ, ಆಧಾರ್ ಲಿಂಕ್, ರೈತರ ಬೆಳೆ ವಿಮೆ ಮತ್ತು ಸೌಲಭ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಯೋಜನೆ , ಗೃಹ ಲಕ್ಷ್ಮೀ ಯೋಜನೆ, ಪ್ರತ್ಯೇಕ ಸೌಲಭ್ಯ ಗಳು , ವಿದ್ಯುತ್ ಸಮಸ್ಯೆ, ಸ್ವಚ್ಛತೆ, ಚರಂಡಿಗಳ ವ್ಯವಸ್ಥೆ, ಕನ್ನಡ ಪೆರಾಜೆ ಮತ್ತು ಕನ್ನಡ .ಬಿ ಪೆರಾಜೆ ರಸ್ತೆ ಸಮಸ್ಯೆ, ದೊಡ್ಡಡ್ಕ , ಕಾಪು ಮಲೆ, ಕುಂದಲ್ಪಾಡಿ , ಕೂರ್ನಡ್ಕ , ಕೆಂಗಮೊಟ್ಟೆ, ಆಲೆಟ್ಟಿ , ಕುಂಬಳ ಚೇರಿ ಅಂಗನವಾಡಿ ಮಕ್ಕಳಿಗೆ ಆಹಾರದ ಕೊರತೆ, ನೀರಿನ ಪೈಪ್ ಸರಿಪಡಿಸುವಿಕೆ, ರಸ್ತೆ ಕಾಂಕ್ರೀಟ್ ಕರಣ ಮತ್ತು ದುರಸ್ಥಿ, ಉದ್ಯೋಗ ಖಾತರಿ ಯೋಜನೆ, ಸೋಲಾರ್ ಅಳವಡಿಕೆ, ಮುಂತಾದ ಅಭಿವೃದ್ದಿ ಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾಂ.ಪಂ ಸದಸ್ಯರಾದ ಪ್ರವೀಣ್ ಮಜಿಕೋಡಿ , ಸುರೇಶ್ ಪೆರುಮುಂಡ, ಶ್ರೀಮತಿ ಚಂದ್ರಾವತಿ ಜಯರಾಮ, ಜಯಲಕ್ಷ್ಮೀ , ಪೂರ್ಣಿಮಾ ಉದಯಕುಮಾರ್
ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆ , ಬಿ.ಸಿ.ಎಂ. ಇಲಾಖೆ, ಮೆಸ್ಕಾಂ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯ ಇಲಾಖೆ , ಅರಣ್ಯ ಇಲಾಖೆ , ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, , ಸಮಾಜ ಕಲ್ಯಾಣ ಇಲಾಖೆ, ಮುಂತಾದ ಇಲಾಖೆ, ಅಂಗನವಾಡಿ , ಆಶಾ ಕಾರ್ಯರ್ತೆಯರು – ಸಿಬ್ಬಂದಿವರ್ಗ, ಗ್ರಾಂ. ಪಂ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.