ಈ ಮರ ಬೀಳುವ ಸ್ಥಿತಿಯಲ್ಲಿದೆಯಲ್ಲವೇ..?
ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆ ಚರಂಡಿಗಳಿಲ್ಲದೇ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮುರುಳ್ಯ ರಸ್ತೆ ಅಂಚಿನಲ್ಲಿ ಗಿಡ ಪೊದರುಗಳ ಹೆಚ್ಚಿದೆ. ಕೊಡ್ಯ ಗದ್ದೆಯಲ್ಲಿ ( ಮಿಲ್ಕ್ ಮಾಸ್ಟರ್ ಸಂಸ್ಥೆಯ ಹತ್ತಿರ) ಚರಂಡಿಯು ಇಲ್ಲ . ವಾಹನಗಳು ಸಂಚರಿಸುವಾಗ ಎದುರು ಬದುರು ಬಂದರೆ ಗೋಚರವಾಗದ ಸ್ಥಿತಿ ಇದೆ.
ರಾಗಿಪೇಟೆಯಲ್ಲಿ ಮರವೊಂದು ರಸ್ತೆಯ ಮೇಲೆ ಬೀಳುವ ಸ್ಥಿತಿಯಲ್ಲಿದೆ. ಅಲೆಕ್ಕಾಡಿ ಶಾಲೆ ಗೇಟ್ ನ ಬಳಿ ಮರಗಳು ರಸ್ತೆಯಂಚಿನಲ್ಲಿದ್ದು ಬಿದ್ದರೆ, 2-3 ವಿದ್ಯುತ್ ಕಂಬಗಳು ಬಿದ್ದು ಹತ್ತಿರದ ಮನೆಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಲೆಕ್ಕಾಡಿ ಹಾಲು ಸೊಸೈಟಿ ಹತ್ತಿರ ಚರಂಡಿಯ ಪಕ್ಕದಲ್ಲಿ ಬರೆ ಮರದ ಪಕ್ಕದಲ್ಲಿಯೇ ಜರಿಯಲಾರಂಭಿಸಿದೆ. ಅದು ಬಿದ್ದರೆ 3 ವಿದ್ಯುತ್ ಕಂಬಗಳು ಧಾರಾಶಾಯಿಯಾಗಬಹುದು. ಅರಣ್ಯ ಇಲಾಖೆಗೆ, ಪಂಚಾಯತ್ ಗೆ ಗಮನಕ್ಕೆ ಈ ಕುರಿತು ತರಲಾಗಿದ್ದರೂ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.
ಎಣ್ಮೂರು ಪ್ರೌಢಶಾಲಾ ಬಳಿ ರಾಜ್ಯ ರಸ್ತೆಯ ಇಕ್ಕೆಲಗಳಲ್ಲಿ ಮರಗಳು ರಸ್ತೆಗೆ ವಾಲಿ ನಿಂತಿದೆ. ನಿಂತಿಕಲ್ಲು ಪೇಟೆಯಲ್ಲಿ ಚರಂಡಿ ಮಾಯವಾಗಿ ರಸ್ತೆಯಲ್ಲಿ ಹರಿಯುವ ನೀರಿನಿಂದಾಗಿ ರಸ್ತೆ ಸಂಚಾರ ದುಸ್ತರವಾಗಿದೆ.
ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಿಸಿದರೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ನಿಟ್ಟುಸಿರು ಬಿಡುವಂತಾಗಬಹುದು.
ವರದಿ : ಸಂಕಪ್ಪ ಸಾಲ್ಯಾನ್