ಎನ್ ಎಸ್ ಯು ಐ ಕೊಡಗು ಜಿಲ್ಲಾ ವತಿಯಿಂದ ಸಂಪಾಜೆ ಕಾಲೇಜಿನಲ್ಲಿ ಡ್ರಗ್ಸ್ ಹಾಗೂ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಹಾಗೂ ರಸ್ತೆ ಸುರಕ್ಷತಾ ಮಾಹಿತಿ

0

ಎನ್ ಎಸ್ ಯು ಐ ಕೊಡಗು ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ರಾಶೀದ್ ನೇತೃತ್ವದಲ್ಲಿ ಡ್ರಗ್ಸ್ ಹಾಗೂ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಆ.6 ರಂದು ಸಂಪಾಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ರವರು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಡ್ರಗ್ಸ್ ಹಾಗೂ ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಸಂಪೂರ್ಣವಾಗಿ ಸುಸೂತ್ರವಾಗಿ ವಿಷಯ ಮಂಡನೆ ಮಾಡಿದರು, ಎನ್ ಎಸ್ ಯು ಐ ರಾಜ್ಯ ನಿಕಟ ಪೂರ್ವ ಉಪಾದ್ಯಕ್ಷರಾದ ಪ್ರದೀಪ್ ರೈ ರವರು ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಮಾದಕ ವ್ಯಸನದ ವಿರುದ್ಧ ಮಾಹಿತಿ ನೀಡಿದರು, ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ರಾಶಿದ್ ಎನ್ ಎಸ್ ಯು ಐ ರವರು ವಿದ್ಯಾರ್ಥಿಗಳಿಗೆ ಎನ್ ಎಸ್ ಯು ಐ ಬಗ್ಗೆ ಸಂಪೂರ್ಣವಾಗಿ ವಿಸ್ತಾರವಾಗಿ ವಿವರವನ್ನು ನೀಡಿದರು,ಹಾಗೂ ವಿಧ್ಯಾರ್ಥಿಗಳ ಸಬಲೀಕರಣ ನಾಯಕತ್ವ ಅಭಿವೃದ್ಧಿಪಡಿಸಿ,ಯುವ ಆಂದೋಲನದ ಬಗ್ಗೆ ಅಧ್ಯಕ್ಷರು ಮಾಹಿತಿ ನೀಡಿದರು,
ಕಾರ್ಯಕ್ರಮದಲ್ಲಿ ಎನ್ ಎಸ್ ಯು ಐ ಕೊಡಗು ಜಿಲ್ಲಾ ಪದಾಧಿಕಾರಿಗಳಾದ ಅರ್ಜುನ್, ಶರಣ್, ಯತೀಶ್, ಕಾರ್ತಿಕ್, ಸಂತೋಷ್ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು ಮತ್ತು ಕಾಲೇಜ್ ಹಾಗೂ ಪ್ರೌಢ ಶಾಲಾ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ವಿಧ್ಯಾರ್ಥಿಗಳ ಉಪಸ್ಥಿತರಿದ್ದರು.

ಸಂಪಾಜೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಐತ್ತಪ್ಪನವರು ಸ್ವಾಗತಿಸಿ ಎನ್ ಎಸ್ ಯು ಐ ಕಾರ್ಯದರ್ಶಿ ರುನೈಝ್ ಕೊಯನಾಡು ವಂದಿಸಿದರು.