ಮುರುಳ್ಯ : ನಳಿಯಾರುನಲ್ಲಿ ತಡೆಗೋಡೆ ಕುಸಿತ

0


ಮುರುಳ್ಯ ಗ್ರಾಮದ ಶೇರ – ಮಾನ್ಯಡ್ಕ ರಸ್ತೆಯ ನಳಿಯಾರು ಎಂಬಲ್ಲಿ ಡಾಮಾರು ಹಾಗೂ ತಡೆಗೋಡೆಯ ನಡುವೆ ಬಿರುಕು ಬಿಟ್ಟು, ತಡೆಗೋಡೆ ಜರಿದು ಬಿದ್ದಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಪಂಚಾಯತ್‌ನವರು ಈ ಬಗ್ಗೆ ಗಮನಹರಿಸಬೇಕೆಂದು ಆ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.