ಸುಳ್ಯದಲ್ಲಿ ಸಮರ್ಪಕವಾಗಿ ಆಧಾರ್ ಸೇವೆ ಸಿಗುವಂತಾಗಲಿ : ರಿಯಾಜ್ ಕಟ್ಟೆಕಾರ್ ಒತ್ತಾಯ

0

ಆಧಾರ್ ಕಾರ್ಡ್ ಇಲ್ಲದೆ ಸರಕಾರಿ, ಖಾಸಗಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಬ್ಯಾಂಕ್ ಅಕೌಂಟ್, ಪಿಂಚಣಿಗಳು, ಶಾಲಾ ಕೆಲಸ, ಆಸ್ಪತ್ರೆ ಚಿಕಿತ್ಸೆ ಸೇರಿದಂತೆ ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯ. ಪ್ರಸ್ತುತ ಸುಳ್ಯದಲ್ಲಿ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯಲ್ಲಿ ಮಾತ್ರ ಆಧಾರ್ ಸೇವೆ ಸಿಗುತ್ತಿದ್ದು ಅದು ಸಾಕಾಗುತ್ತಿಲ್ಲ. ಇಲ್ಲಿ ದಿನವೊಂದಕ್ಕೆ 20 ಜನರಿಗಷ್ಟೆ ಸೇವೆ ಸಿಗುತ್ತಿದೆ. ಟೋಕನ್ ಪಡೆದು ಹಲವಾರು ಮಂದಿ ಕಾಯುವಂತಾಗುತ್ತಿದೆ.

ಆದ್ದರಿಂದ ಈ ಹಿಂದೆ ಸುಳ್ಯ ಅಂಚೆ ಕಚೇರಿ, ತಾ.ಪಂ., ತಾಲೂಕು ಕಚೇರಿಯಲ್ಲಿ ಆಧಾರ್ ಸೇವೆ ಸಿಗುವಂತಾಗಬೇಕು. ಈ ಕುರಿತು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಜನರ ಸಮಸ್ಯೆಗೆ ಸ್ಪಂದನೆ ನೀಡಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.