ಕೊಡಗು ಜಿಲ್ಲಾ ಕ.ಸಾ.ಪ, ಮಡಿಕೇರಿ ತಾಲೂಕು ಕ.ಸಾ.ಪ, ಸಂಪಾಜೆ ಹೋಬಳಿ ಘಟಕ ಕ.ಸಾ.ಪ, ಜ್ಯೋತಿ ವಿದ್ಯಾಸಂಘ ಇವುಗಳ ಆಶ್ರಯದಲ್ಲಿ ಜ್ಯೋತಿ ಪ್ರೌಢಶಾಲೆ ಪೆರಾಜೆ ಸಭಾಂಗಣದಲ್ಲಿ 2022 23ನೇ ಸಾಲಿನ ದಿ. ಗಂಗಾಧರ ಶೇಟ್ ಸುಲೋಚನ ಬಾಯಿ ದತ್ತಿ ಕಾರ್ಯಕ್ರಮ ನಡೆಯಿತು.
ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಡಾ. ಜ್ಞಾನೇಶ್ ನಿಡ್ಯಮಲೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕೊಡಗು ಕ.ಸಾ.ಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರು ಪ್ರಾಸ್ಥಾವಿಕ ಮಾತನಾಡಿ, ಗಂಗಾಧರ್ ಶೇಟ್ ಮತ್ತು ಸುಲೋಚನ ಬಾಯಿ ಅವರು ನಡೆಸಿದ್ದ ಸಾಮಾಜಿಕ ಕಾರ್ಯಗಳ ವಿವರಣೆ ನೀಡಿದರು.
ದತ್ತಿ ದಾನಿಗಳಾದ ಎಂ.ಜಿ ಮೋಹನ್ ಅವರು ತಮ್ಮ ತಂದೆ-ತಾಯಿಯವರ ಸಾಮಾಜಿಕ ಸೇವೆಯನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಲೇಖಕಿ ಶ್ರೀಮತಿ ಸಹನಾ ಕಾಂತಬೈಲು ಅವರು ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟ ಅದರಲ್ಲೂ ವಿಶೇಷವಾಗಿ ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಕುರಿತಾಗಿ ವಿವರವಾಗಿ ಮಾತನಾಡಿದರು.
ಕ. ಸಾ.ಪ. ಸಂಪಾಜೆ ಹೋಬಳಿ ಘಟಕ ಅಧ್ಯಕ್ಷ ಗೋಪಾಲ ಪೆರಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮರ ಸುಳ್ಯದ ಸ್ವಾತಂತ್ರ ಸಮರದಲ್ಲಿ ಭಾಗಿಯಾದ ಪೆರಾಜೆಯ ನಿಡ್ಯಮಲೆ, ಕೋಡಿ ಮನೆತನ ಮತ್ತು ಅಂದಿನ ಹೋರಾಟದಲ್ಲಿ ಶಿಕ್ಷೆಗೆ ಒಳಪಟ್ಟ ಪೆರಾಜೆಯ ಸ್ಥಾನಿಕ ಕೃಷ್ಣಯ್ಯ ಕುರಿತಾಗಿ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಕ.ಸಾ.ಪ ಮಡಿಕೇರಿ, ಟಿ.ಪಿ. ರಮೇಶ್ ಮಾಜಿ ಅಧ್ಯಕ್ಷರು ಕೊಡಗು ಕ.ಸಾ.ಪ, ಸುರೇಶ್ ಪೆರುಮುಂಡ ಸದಸ್ಯರು ಗ್ರಾಮ ಪಂಚಾಯತ್, ಪೆರಾಜೆ
ಲೋಕನಾಥ ಅಮಚೂರು, ಮುಡುಕಜೆ ಹರೀಶ್ಚಂದ್ರ, ಶ್ರೀಮತಿ ರೇವತಿ ರಮೇಶ್, ನಾಗರಾಜ್ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಶಿಕ್ಷಕ ವೃಂದ ಮತ್ತು ಸಾರ್ವಜನಿಕರು ಭಾಗಿಯಾಗಿದ್ದ ಕಾರ್ಯಕ್ರಮವನ್ನು ಶ್ರೀಮತಿ ಸಂಗೀತ ರವಿರಾಜ್ ನಿರೂಪಿಸಿದರು.