ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ ಪೈಚಾರ್ ಇದರ ಮಹಾಸಭೆ ಆ 9ರಂದು ಲತೀಫ್ ಟಿ.ಎ ಅವರ ನೇತೃತ್ವದಲ್ಲಿ ಶಾಂತಿನಗರದಲ್ಲಿ ನಡೆಯಿತು.
ಸಭೆಯ ಉದ್ಘಾಟನೆಯನ್ನು ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್ ನೆರವೇರಿಸಿದರು.
ವೇದಿಕೆಯಲ್ಲಿ
ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಶಾಫಿ ಪ್ರಗತಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಝಾಕ್ ಬೊಳುಬೈಲು ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಮಿತಿವತಿಯಿಂದ ರೂಪಿಸುವ ಕ್ರಿಯಾ ಯೋಜನೆ, ಹಾಗೂ
ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಬಳಿಕ 2024 .2025 ನೇ ಸಾಲಿನ ನೂತನ
ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ರೀಫಾಯಿ ಎಸ್ ಎ ಇವರನ್ನು.ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸತ್ತಾರ್ ಪಿ.ಎ ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿಯಾಗಿ ಝುಬೈರ್, ಕೋಶಾಧಿಕಾರಿ ಹನೀಫ್ ಅಲ್ಘಾ ಹಾಗೂ ಸದಸ್ಯರಾಗಿ ಮುಜೀಬ್ ಪೈಚಾರ್.ನಝೀರ್ ಶಾಂತಿನಗರ, ಬಶೀರ್ ಆರ್.ಬಿ, ಸಿರಾಜ್ ಎಸ್.ಪಿ, ಬಶೀರ್ ಕೆ.ಪಿ, ಅಶ್ರಫ್, ಪೈಚಾರ್,ಇಬ್ರಾಹಿಂ, ಶಾಂತಿನಗರ,ಆರಿಸ್ ಶಾಂತಿನಗರ
ಇವರನ್ನು ಅಯ್ಕೆ ಮಾಡಲಾಯಿತು..
ರಝಾಕ್ ಬೊಳುಬೈಲು ಸ್ವಾಗತಿಸಿ
ವಂದಿಸಿದರು.