ಕರ್ನಾಟಕತ್ತಿಲೆ ಕರ್ಷರ ಸಮರಂ ಆಗಿಕೊಡಗು ಕೆನರಾ ರೈತ ಬಂಡಾಯ

0

ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲ ರಚಿಸಿದ ಸಂಶೋಧನಾ ಕೃತಿ ಕೊಡಗು-ಕೆನರಾ ರೈತ ಬಂಡಯ ೧೮೩೭ ಮಲೆಯಾಳಂಗೆ ಅನುವಾದಗೊಂಡಿದ್ದು, ಕರ್ನಾಟಕತ್ತಿಲೆ ಕರ್ಷಕ ಸಮರಂ ಎಂಬ ಶಿರೋನಾಮೆಯಲ್ಲಿ ಪ್ರಕಟಣೆಗೆ ಸಿದ್ಧಗೊಂಡಿದೆ.


ಶಿಶಿಲರ ಪುಂಸ್ತ್ರೀ, ಮತ್ಸ್ಯಗಂಧಿ ಮತ್ತು ಚಿದಗ್ನಿ ಕಾದಂಬರಿಗಳನ್ನು ಮಲೆಯಾಳಂಗೆ ತರ್ಜುಮೆಗೊಳಿಸಿದ ಪ್ರೊ| ಕೆ.ಪಿ. ಕುಮಾರನ್ ಕೊಡಗು ಕೆನರಾ ರೈತ ಬಂಡಾಯವನ್ನು ಮಲೆಯಾಳಂಗೆ ಅನುವಾದಿಸಿದ್ದು, ಕೇರಳದ ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷದ ತಿರುವನಂತಪುರದ ಚಿಂತಾವಲ್ಲಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಆಗಸ್ಟ್ ತಿಂಗಳ ಅಂತ್ಯಕ್ಕೆ ಹೊರತರಲಿದೆ.


೧೮೩೭ರ ಅಮರ ಸುಳ್ಯ ರೈತ ಕ್ರಾಂತಿಯ ವಸ್ತುವನ್ನು ಹೊಂದಿರುವ ಈ ಕೃತಿಯನ್ನು ಭಾರತದ ಅನ್ಯಭಾಷೆಗಳಲ್ಲಿ ಹೊರತರಲು ಚಿಂತಾ ಪಂಬ್ಲಿಕೇಷನ್ಸ್ ಯೋಜನೆಯೊಂದನ್ನು ರೂಪಿಸಿದೆ. ಮೂಲ ಕನ್ನಡ ರೂಪದಲ್ಲಿ ಈ ಕೃತಿ ೨೦೨೨ರಲ್ಲಿ ಗೂನಡ್ಕದ ಸಜ್ಜನ ಪ್ರತಿಷ್ಠಾನದ ಮೂಲಕ ಹೊರ ಬಂದಿರುತ್ತದೆ.