ರೋಟರಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಇನ್ಸ್ಟಾಲೇಶನ್ ಕಾರ್ಯಕ್ರಮ

0


2024-2025 ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಇನ್ ಸ್ಟಾಲೇಷನ್ ಕಾರ್ಯಕ್ರಮವು ದಿನಾಂಕ 10-08-2024 ರಂದು ರೋಟರಿ ಪ್ರೌಢಶಾಲೆಯಲ್ಲಿ ನಡೆಯಿತು.ಇನ್ಸ್ಟಾಲೇಷನ್ ಅಧಿಕಾರಿ ರೊ.ಯೋಗಿತಾ ಗೋಪಿನಾಥ್ ಕ್ಲಬ್ ಇನ್ಸ್ಟಾಲೇಶನ್ ಮಾಡಿ ಕ್ಲಬ್ ಸದಸ್ಯರಿಗೆ ಮಾರ್ಗದರ್ಶನವನ್ನು ನೀಡಿದರು.ಸಂಚಾಲಕರಾದ ರೊ.PP.PHF. ಪ್ರಭಾಕರನ್ ನಾಯರ್ ಕಾರ್ಯಕ್ರಮವನ್ನುದೇಶಿಸಿ ಮಾತಾಡಿದರು.ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಅತೀ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಟ್ರಸ್ಟ್ ಸದಸ್ಯರಾದ ರೊ.PP.PHF ಗಿರಿಜಾ ಶಂಕರ್ ತುದಿಯಡ್ಕ,ರೊ.PP.PHF ದಯಾನಂದ ಆಳ್ವ,ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ,ಇಂಟಾರ್ಯಾಕ್ಟ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಸಿಂಚನಾ.N.P
ಪ್ರಸ್ತುತ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಹಿಮಾನಿ, ಕಾರ್ಯದರ್ಶಿ ಪೃಥ್ವಿರಾಜ್, ಉಪಾಧ್ಯಕ್ಷೆ ದಿಗಂತ್ ಕಲ್ಲು ಗದ್ದೆ,ಜಂಟಿ ಕಾರ್ಯದರ್ಶಿ ಹಂಸಿಕಾ, ಫಿನಾನ್ಸ್ ಡೈರೆಕ್ಟರ್ ಪ್ರೇರಣಾ ಶೆಟ್ಟಿ.M,ಕ್ಲಬ್ ಸರ್ವಿಸ್ ಡೈರೆಕ್ಟರ್ ಶ್ರೇಯಸ್ ಬೇರಿಕೆ, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಅನುಷ್ ಗೌಡ N.H, ಇನ್ಸ್ಟಿಟ್ಯೂಷನ್ ಸರ್ವಿಸ್ ಡೈರೆಕ್ಟರ್ ನಿರೀಕ್ಷಾ ಸುಲಯಾ, ಇಂಟರ್ನ್ಯಾಷನಲ್ ಅಂಡರ್ಸ್ಟಾಂಡಿಗ್ ಸರ್ವಿಸ್ ಡೈರೆಕ್ಟರ್ ಅಖಿಲ್ ಕೆ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷೆ ಹಿಮಾನಿ ಅಧ್ಯಕ್ಷೀಯ ನೆಲೆಯಲ್ಲಿ ಮಾತಾಡಿದರು.ದಿಗಂತ್ ಕಲ್ಲುಗದ್ದೆ ಸ್ವಾಗತಿಸಿ, ಪೂರ್ವಿಕ,ಗಾನವಿ ವಂದಿಸಿದರು.ಸರ್ಜೆಂಟ್ ಶೈಮಾ ಎಸ್.ಎಮ್ ಮತ್ತು ವಂಶಿಕಾ ನಿರೂಪಿಸಿದರು.ಇಂಟರ್ಯಾಕ್ಟ್ ಸಂಯೋಜಕರಾದ ಶ್ರೀ ಹರಿ ಪೈಂದೋಡಿ, ಶ್ರೀಮತಿ ಜಯಶ್ರೀ.ಕೆ, ಶ್ರೀಮತಿ ಸಂಜೀವಿ ಪಿ.ಆರ್ ಸಹಕರಿಸಿದರು.