ಹಿಂದಿನ ಘಟನೆ ನೆನೆದು ಭಯಬೀತರಾಗಿ ಆತಂಕ ಗೊಂಡ ಜನ
ಕಲ್ಮಕಾರು ಭಾಗದಲ್ಲಿ ಒಮ್ಮಿದೊಮ್ಮೆಲೆ ಜೋರಾಗಿ ಮಳೆ ಸರಿದು ಮಳೆ ನೀರು ಹರಿದು ಬಂದು ಈ ಭಾಗದ ಜನ ಹಿಂದಿನ ಘಟನೆ ನೆನೆದು ಭಯಬೀತರಾಗಿ ಆತಂಕ ಗೊಂಡ ಘಟನೆ ಆ.12 ರ ರಾತ್ರಿ ನಡೆದಿದೆ.
ಇನೇನು ಕತ್ತಲು ಆವರಿಸುತ್ತಿದೆ ಅನ್ನುವ ಸಮಯಕ್ಕೆ ಕೂಜಿಮಲೆ, ಕಡಮಕಲ್ಲು ಎಸ್ಟೇಟ್ ಭಾಗದಿಂದ ಧಾರಕಾರ ನೀರು ಹರಿದು ಬಂದಿದೆ. ಕಲ್ಮಕಾರಿನಲ್ಲೂ ಮಳೆ ಬಂದಿದೆ. ನದಿಯಲ್ಲಿ ಕೆಲ ಮರದ ಹಳೆಯ ದಿಮ್ಮಿಗಳು ನೀರಲ್ಲಿ ತೇಲಿ ಬಂದಿರುವುದಾಗಿ ವರದಿಯಾಗಿದೆ.
ಇದರಿಂದಾಗಿ ಕಲ್ಮಕಾರಿನ ಹಲವರು ಹರಿಹರ ಭಾಗದ ಜನರಿಗೆ ಪೋನ್ ಮಾಡಿ ಮಾಹಿತಿ ನೀಡಿದ್ದರು. ಕೆಲ ಹೊತ್ತಿನ ಬಳಿಕ ಮಳೆ ಕಡಿಮೆ ಆಗಿದ್ದು ಹರಿಹರ ಮತ್ತಿತರ ಕಡೆ ಸೇತುವೆ ಗಳಲ್ಲಿ ಮರದ ದಿಮ್ಮಿಗಳು ಶೇಖರಗೊಂಡಿವೆ.
ಈ ಎಲ್ಲಾ ಘಟನೆಗಳು ಕಳೆದ ಎರಡು ವರ್ಷಗಳ ಹಿಂದೆ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು ಭಾಗದಲ್ಲಿ ಮಳೆಯಿಂದಾಗಿ ಉಂಟಾದ ತೊಂದರೆ ಮತ್ತೆ ನೆನೆಪಿಸುವಂತಾಯಿತು.