ಭಾರೀ ಮಳೆಗೆ: ಬೊಳ್ಮಲೆಯಲ್ಲಿ ರಸ್ತೆಗೆ ನುಗ್ಗಿದ ನೀರು

0

ಪಂಜ ಪರಿಸರದಲ್ಲಿ ಆ.13ರಂದು ರಾತ್ರಿ ಭಾರೀ ಮಳೆ ಸುರಿದಿದ್ದು ಪಂಜ ಹೊಳೆ ಸೇತುವೆಗೆ ತಾಗಿ ಹರಿಯುತ್ತಿದ್ದು ಅಲ್ಲೇ ಪಕ್ಕದ ಬೊಳ್ಮಲೆಯಲ್ಲಿ ಪಂಜ -ಸುಬ್ರಹ್ಮಣ್ಯ ರಸ್ತೆಯಲ್ಲಿ ಪಂಜ ಹೊಳೆ ನೀರು ಉಕ್ಕಿ ಹರಿಯುತ್ತಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕೇವಲ ಸುಮಾರು 1 ತಾಸಿನಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಎಲ್ಲೆಡೆ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದ್ದು ಹಲವು ಕಡೆ ರಸ್ತೆಯಲ್ಲಿ ಮಣ್ಣು, ಕಲ್ಲುಗಳು ತುಂಬಿದೆ