ಕೆವಿಜಿ ಐಪಿಎಸ್-ಸಿಬಿಎಸ್ ಸಿ ಒಕ್ಕೂಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಕೊಡಗಿನ ಬ್ರಹ್ಮಗಿರಿ ಸಹೋದಯ  ಸಿಬಿಎಸ್ಇ ಒಕ್ಕೂಟವು ಆಯೋಜಿಸಿದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಅ. 13ರಂದು ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದುಕೊಂಡರು.  

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಸೇರಿದಂತೆ ಒಟ್ಟು ಎಂಟು ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿತು. ಕೆವಿ ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಗ್ಗಜಗ್ಗಾಟದಲ್ಲಿ ಹತ್ತನೇ ತರಗತಿಯ ಗಾಯಕ್ ಕೆ, ವರ್ಷಿತ್ ಎಂ.ಯನ್, ಉತ್ಸವ್ ಯು, ವೇಕಾಂಶ್ ವಿ ರೈ, ಪ್ರಥಮ್ ಪಿ ಶೆಟ್ಟಿ, ಚಮನ್ ಡಿ ಕೆ, ಅನೀಶ್ ಕೆ ಎ 9ನೇ ತರಗತಿಯ ಭವಿತ್, ಮೊಹಮ್ಮದ್ ರಾಝಿ ಎ. ಎಂ, ಮೊಹಮ್ಮದ್ ಶಮಾಜ್ ಕೆ. ಆರ್, ಅಲನ್ ಪಿ. ಬಿ ಪ್ರಥಮ ಸ್ಥಾನ ಪಡೆದರೆ ರಿಲೇ ಯಲ್ಲಿ ಏಳನೇ ತರಗತಿಯ ರಾಕೇಶ್ ಎಂ ಎಚ್, ಮೊಹಮ್ಮದ್ ಶಾನ್, ಅಬ್ದುಲ್ ಇಬಾಶ್, ಆರನೇ ತರಗತಿಯ ಮಹಮ್ಮದ್ ಹಾದಿ ಸನಾದ್ ತೃತೀಯ ಸ್ಥಾನವನ್ನು, 100ಮೀ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಆರನೇ ತರಗತಿಯ ಥೈಭಾ ಫಾತಿಮಾ ದ್ವಿತೀಯ ಸ್ಥಾನವನ್ನು ಪಡೆದಳು.

ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ ಮತ್ತು ಆಶಾ ಜ್ಯೋತಿ ಮಾರ್ಗದರ್ಶನವನ್ನು ನೀಡಿದರು .

ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಶಾಲಾ ಕ್ರೀಡಾ ಸಂಯೋಜನಾಧಿಕಾರಿ ಮೆಲ್ವಿನ್ ಎಲ್ ಪಾಯಸ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.