ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತ್ಯು
ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಇಲೆಕ್ಟ್ರೀಷಿಯನ್ ಸತ್ಯನಾರಾಯಣರವರು ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹಳೆಗೇಟಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮಿ ಆಟೋ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ಸತ್ಯ ಎಂಬುವವರು ಆ 12 ರಂದು ಕೆಲಸದ ವೇಳೆಯಲ್ಲಿ ಹಠಾತ್ ಕುಸಿದು ಬಿದ್ದು ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಸತ್ಯ ಅವರಿಗೆ ಬಿ ಪಿ ಸಮಸ್ಯೆ ಇದ್ದು, ಘಟನೆ ನಡೆದ ನಿನ್ನೆ ದಿನ ಸಂಜೆ ಸುಮಾರು 6 ಘಂಟೆ ಯ ವೇಳೆ ಕೆಲಸ ಮಾಡುತ್ತಿರುವಾಗಲೇ ತಲೆ ತಿರುಗಿದಂತೆ ಆಗಿ ಅಲ್ಲೇ ಕುಸಿದು ಬಿದ್ದಿದ್ದರು. ಇದನ್ನು ನೋಡಿದ ಪಕ್ಕದಲ್ಲಿದ್ದ ಗ್ರಾಹಕರು ಕೂಡಲೇ ಅವರನ್ನು ಹಿಡಿದುಕೊಂಡಿದ್ದು ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು.
ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದು ಬಳಿಕ ಅವರನ್ನು ಮಂಗಳೂರು ಇಂಡಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ಇದೀಗ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರೆಂದು ತಿಳಿದುಬಂದಿದೆ.
ಅವರಿಗೆ 40 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಅನಿತಾ ಹಾಗೂ ಇಬ್ಬರು ಮಕ್ಕಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಕಳೆದ ಕೆಲ ವರ್ಷಗಳಿಂದ ಹಳೆಗೇಟಿನಲ್ಲಿ ವಾಹನಗಳ ಎಲೆಕ್ಟ್ರಿಷಿಯನ್ ಕೆಲಸ ನಿರ್ವಹಿಸುತ್ತಿದ್ದರು.