ಸುಳ್ಯ ತಾಲೂಕು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘ

0

ಅಧ್ಯಕ್ಷ- ತೀರ್ಥಕುಮಾರ್ ಕುಂಚಡ್ಕ , ಕಾರ್ಯದರ್ಶಿ -ಮನುದೇವ್ ಪರಮಲೆ, ಕೋಶಾಧಿಕಾರಿ – ಗಿರೀಶ್ ನಾರ್ಕೋಡು

ಸುಳ್ಯ ತಾಲೂಕು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಇದರ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ತೀರ್ಥಕುಮಾರ್ ಕುಂಚಡ್ಕ ಹಾಗೂ ಕಾರ್ಯದರ್ಶಿಯಾಗಿ ಮನುದೇವ್ ಪರಮಲೆ, ಕೋಶಾಧಿಕಾರಿಯಾಗಿ ಗಿರೀಶ್ ನಾರ್ಕೋಡು ಅವರು ಆಯ್ಕೆಯಾಗಿರುತ್ತಾರೆ.


ಸುಳ್ಯದ ಬೀರಮಂಗಲದ ಗೆಸ್ಟ್ ಹೌಸ್ ನಲ್ಲಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಬಾಳುಗೋಡುರವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.ಸಂಘದ ಉಪಾಧ್ಯಕ್ಷರುಗಳಾಗಿ ಶಬೀರ್ ಸಾಹೇಬ್ ಮತ್ತು ಪ್ರಶಾಂತ್ ಕಲ್ಲುಗುಂಡಿ,ಜತೆ ಕಾರ್ಯದರ್ಶಿಗಳಾಗಿ ಶ್ರೇಯಸ್ ಮುತ್ಲಾಜೆ ಮತ್ತು ಸುನಿಲ್ ರೈ ಮೇನಾಲ ಆಯ್ಕೆಯಾಗಿರುತ್ತಾರೆ. ಸುಬೋಧ್ ಶೆಟ್ಟಿ ಮೇನಾಲ ಸ್ವಾಗತಿಸಿ, ರಾಜೇಂದ್ರ ಕುಮಾರ್ ಶೆಟ್ಟಿ ವಂದಿಸಿದರು.