ಮುರ್ಕೆತ್ತಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪ್ರಗತಿ ಕಡೆ ಹೆಜ್ಜೆ ಹಾಕೋಣ – ಶಹಿನಾಜ್

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಹನಾಜ್ ಅಬ್ದುಲ್ ರಹೀಂ ನೇರವೇರಿಸಿ ನಾವೆಲ್ಲ ಒಗ್ಗಟ್ಟಾಗಿ ಅಭಿವೃದ್ಧಿ ಕಡೆಗೆ ಗಮನಹರಿಸುವಂತೆ, ದೊರಕಿದ ಸ್ವಾತಂತ್ರ್ಯ ಇನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಇದಕ್ಕಾಗಿ ನಾವೆಲ್ಲ ಒಂದಾಗಿ ಭಾವೈಕ್ಯತೆ ಸಾರೋಣ ಎಂದರು

ಸಭಾಧ್ಯಕ್ಷ ತೆಯನ್ನು ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವೆಂಕಪ್ಪ ಗೌಡ ನಾರ್ಕೋಡು, ಇಬ್ರಾಹಿಂ ಅಂಬಟೆ ಗದ್ದೆ, ಬಾಲವಿಕಾಸ ಅಧ್ಯಕ್ಷೆ ಶ್ರೀಮತಿ ವಂದನ, ಶ್ರೀಮತಿ ದೇವಕಿ, ಶ್ರೀಮತಿ ಶಾಲಿನಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪೋಷಕರು, ಪುಟಾಣಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ದಾನಿಗಳು, ಪೋಷಕರು ಸಿಹಿತಿಂಡಿ ವ್ಯವಸ್ಥೆ ಗೊಳಿಸಿದರು.

ಅಂಗನವಾಡಿ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಕಾರ್ಯಕ್ರಮ ವ್ಯವಸ್ಥೆ ಗೊಳಿಸಿದರು