ಗೂನಡ್ಕ : 78ನೇ ಸ್ವಾತಂತ್ರ್ಯ ಸಂಭ್ರಮ

0

ಹಿಮಾಯತುಲ್ ಇಸ್ಲಾಂ ಜಮಾಅತ್ ಕಮೀಟಿ ಬಿ ಜೆ ಎಂ ಗೂನಡ್ಕ ಇದರ ವತಿಯಿಂದ ದೇಶದ 78 ನೇ ಸ್ವಾತಂತ್ರ್ಯ ದಿನಾಚರರಣೆಯು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರ ಧ್ವಜಾರೋಹಣದೊಂದಿಗೆ ನಡೆಯಿತು.


ಸ್ಥಳೀಯ ಖತೀಬರಾದ ಅಬೂಬಕ್ಕರ್ ಸಖಾಪಿ ಅಲ್ ಹರ್ಷದಿ ಯವರ ಪ್ರಾರ್ಥನೆ ನೆರವೇರಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಗಳಾದ ನೇತಾರರನ್ನು ಸ್ಮರಿಸಿದರು.

ಮುಹಮ್ಮದ್ ಕುಂಞಿ ಗೂನಡ್ಕ ರವರು ತಮ್ಮ ಅದ್ಯಕ್ಷ ತೆ ವಹಿಸಿ ಮಾತನಾಡಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ ಮತ ಭೇದವಿಲ್ಲದೆ ಭಾಗವಹಿಸಿ ನಮಗೆ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ವನ್ನು ನಾಡಿನ ಸರ್ವ ಜನಾಂಗದೊಂದಿಗೆ ಶಾಂತಿ ಸೌಹಾರ್ದತೆಯೊಂದಿಗೆ ಸಹ ಬಾಳ್ವೆ ನಡೆಸಿ ಕೊಳ್ಳುವಂತೆ ಕರೆ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬೂಶಾಲಿ ಮತ್ತು ಶೌವಾದ್ ಗೂನಡ್ಕ ರವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಜಾಫರ್ ಸಾದಿಕ್ ಗೂನಡ್ಕ, ಕೆ.ಎಂ.ಜೆ. ಅಧ್ಯಕ್ಷರಾದ ಎಸ್.ಎಂ.ಅಬ್ದುಲ್ಲ, ಎಸ್.ವೈ.ಎಸ್.ಅಧ್ಯಕ್ಷರಾದ ಹನೀಫ್ ಝೈನಿ, ಎಸ್.ಎಸ್.ಎಫ್.ಅಧ್ಯಕ್ಷರಾದ ಇಸಾಕ್, ಜಮಾಅತ್ ಸಮಿತಿಯ ಸಲಹಾ ಸಮಿತಿ ಸದಸ್ಯರಾದ ಹಾಜಿ ಅಬ್ದುಲ್ಲ ಕೊಪ್ಪದಕಜೆ, ಜಮಾಅತ್ ಸಮಿತಿಯ ಪದಾಧಿಕಾರಿಗಳು, ಅಲ್ ಅಮೀನ್ ಪದಾಧಿಕಾರಿಗಳು, ಸುನ್ನೀ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಣಾ ತಂಡದ ಚಿದಾನಂದ ಮೂಡನಕಜೆ, ಅಶೋಕ ಪೆರುಂಗೋಡಿ, ಸಮಸ್ತ ಜಮಾಅತರು ಹಾಗೂ ಮದ್ರಸಾ ವಿದ್ಯಾರ್ಥಿಗಳು ಬಾಗವಹಿಸಿದರು.


ಮುಹಝ್ಝಿನರಾದ ಅಬ್ದುಲ್‌ ಲತೀಪ್ ಸಖಾಪಿ ಯವರು ಭಾವೈಕ್ಯತೆಯ ಸಂದೇಶ ಸಾರುವ ಪ್ರತಿಜ್ಞಾ ವಿಧಿಗಳನ್ನು ನೆರವೇರಿಸಿದರು
.

ಮದ್ರಸಾ ವಿದ್ಯಾರ್ಥಿ ಶನ್ವಾಝ್ ಕುಂಭಕ್ಕೋಡ್ ಸ್ವಾಗತಿಸಿದರು. ಜಮಾತ್ ಕಾರ್ಯದರ್ಶಿ ಅಝರುದ್ದೀನ್ ಚೇರೂರು ವಂದಿಸಿ, ಜಮಾಅತ್ ಪ್ರದಾನ ಕಾರ್ಯದರ್ಶಿ ಎಸ್ ಎ ಅಶ್ರಪ್ ಕಾರ್ಯಕ್ರಮ ನಿರೂಪಿಸಿದರು.