ದೇವರಕಾನ ಶಾಲೆಯಲ್ಲಿ ಅದ್ದೂರಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವರಕಾನದಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಿತು.
ಮುಂಜಾನೆ 8:30ಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕುತ್ತಾ ಜಾಥಾ ಕಾರ್ಯಕ್ರಮ ನಡೆಯಿತು.
9:30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಗುರುಪ್ರಸಾದ್ ಎಡಮಲೆಯವರು ಧ್ವಜಾರೋಹಣಗೈದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಗುರುಪ್ರಸಾದ್ ಎಡಮಲೆ, ಉಪಾಧ್ಯಕ್ಷೆ ಮಮತಾ ಎಡಮಲೆ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸತೀಶ್ ಎಡಮಲೆ, ಶಾಲೆಯ ಗುಣಮಟ್ಟ ಹಾಗೂ ಉಸ್ತುವಾರಿ ಸಮಿತಿಯ ಸದಸ್ಯರಾಗಿರುವ ನವೀನ್ ಕುಮಾರ್ ಸಾರಕರೆ, ಅಂಗನವಾಡಿ ಕಾರ್ಯಕರ್ತೆ ಕುಮಾರಿ ನಂದಿನಿ ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಕುಮಾರಿ ಶ್ರಾವಣಿಯವರು ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರುಗಳಾಗಿರುವ ಶ್ರೀಮತಿ ಪ್ರಮೀಳಾ ಅವರು ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳ ಭಾಷಣದ ನಂತರ, ವಿದ್ಯಾರ್ಥಿಗಳಿಂದ ಭಾಷಣ ಕಾರ್ಯಕ್ರಮ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವಿದ್ಯಾರ್ಥಿನಿ ಕುಮಾರಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸೌಮ್ಯ ಬಿ ಕೆ ವಂದಿಸಿದರು. ಅತಿಥಿ ಶಿಕ್ಷಕರಾಗಿರುವ ಕುಮಾರಿ ದೀಪ್ತಿ ಸಿ. ವಿ ಹಾಗೂ ಗಾಯತ್ರಿ ಡಿ ಸಹಕರಿಸಿದರು.