ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರೋತ್ಸವ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ ಹಾಗೂ ಅಭಿನಂದನಾ ಕಾರ್ಯಕ್ರಮ

0

ಸುಳ್ಯದ ಸಾಂದೀಪ್ ವಿಶೇಷಮಕ್ಕಳ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ಹಾಗೂ ವಿಶೇಷ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರನ್ನು ಗೌರವಿಸುವ ಕಾರ್ಯಕ್ರಮ ಎಂ ಬಿ ಫೌಂಡೆಶನ್ ಮತ್ತು ಸಿಟಿ ಫ್ರೆಂಡ್ಸ್ & ಆರ್ಟ್ಸ್ ಕ್ಲಬ್ ‌ಜಟ್ಟಿಪಳ್ಳ ಇದರ ಸಹಕಾರದೊಂದಿಗೆ ಅ.15 ರಂದು ಸಾಂದೀಪ್ ವಿಶೇಷ ಮಕ್ಕಳ ಶಾಲೆ ಸಭಾಂಗಣದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ರವರು ವಹಿಸಿದರು.

ಸುಳ್ಯ ತಹಶೀಲ್ದಾರಾದ ಮಂಜುನಾಥ್ ರವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಾಂದೀಪ್ ಶಾಲೆಯ ವಿಶೇಷ ಮಕ್ಕಳಿಗೆ ಏರ್ಪಡಿಸಿ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಸಾಂದೀಪ್ ವಿಶೇಷ ಮಕ್ಕಳ ಶಾಲೆಯ ಗೌರವ ಸಲಹೆಗಾರರಾದ ನೇತ್ರಾವತಿ ಪಡ್ಡಂಬೈಲ್ ರವರು ವಿತರಿಸಿದರು.


ಸುಳ್ಯ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶ್ರೀಮತಿ.ಸೈಲಜಾ, ಯುಎಇ ಯ ಅರ್ಲಾ ಪುಡ್ಸ್ ಕಂಪೆನಿ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಬಶೀರ್, ಸಂಸ್ಕೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಜಯರಾಮ ಬೊಳಿಯಮಜಲು,ಜಟ್ಟಿಪಳ್ಳ ಸಿಎಫ್‌ಸಿ ಅಧ್ಯಕ್ಷರಾದ ಅಬ್ದುಲ್‌ ರಹಿಮಾನ್(ಪಿಕೆ),ಮತ್ತು ಅಬ್ದುಲ್ ರಜಾಕ್ (ಪ್ರಗತಿ ಅಚ್ಚು), ಸರ್ಕಾರಿ ಆಸ್ಪತ್ರೆ ಆರೋಗ್ಯ ಸಮಿತಿ ಸದಸ್ಯರು ಸಮಾಜಸೇವಕರಾದ ಅಬ್ದುಲ್ ರಜಾಕ್ (ಅಚ್ಚು ಪ್ರಗತಿ),ಲ ರಾಮಚಂದ್ರ ಪೆಲ್ತಡ್ಕ, ಲ.ವಿನೋದ್ ಲಸ್ರಾದೊ,ಲ.ಚಂದ್ರಶೇಖರ ನಂಜೆ,ಕಂದಾಯ ಅಧಿಕಾರಿ ಅವಿನ್ ರಂಗತ್ತಮಲೆ,ರವರುಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ಸ್ವಾಗತಿಸಿದರು.


ಎಂ ಬಿ ಫೌಂಡೇಶನ್ ಟ್ರಸ್ಟಿ ಕಾರ್ಯಕ್ರಮ ಸಂಯೋಜಕರಾದ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು ಸಿಟಿ ಫ್ರೆಂಡ್ಸ್ ಆರ್ಟ್ಸ್ ಕ್ಲಬ್ ಜಟ್ಟಿಪಳ್ಳ ಇದರ ಪ್ರಧಾನ ಕಾರ್ಯದರ್ಶಿ ಶಿಹಾಬ್ ಷಾ, ಸದಸ್ಯರಾದ , ನಾಸೀರ್ ಸಿಎ ಇಮ್ರಾನ್, ಮೊಯ್ದೀನ್ ಸ್ಪೋರ್ಟ್ಸ್ ಮ್ಯಾಕ್ಸ್, ಶಿಹಾಬ್ ಚಿನ್ನು,ಪಾರೂಕ್ ಆದರ್ಶ,ರಂಶಾದ್ ಮೊದಲಾದವರು ಸಹಕರಿಸಿದರು.