ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌ ಬೆಳ್ಳಾರೆಯಲ್ಲಿ 78ನೇ ಸ್ವಾತಂತ್ರ್ಯ ದಿನ ಆಚರಣೆ

0

ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌ ಬೆಳ್ಳಾರೆಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೆ.ಕ. ಡಾ| ಕಾರ್ತಿಕ್ ಕಣಕ್ಕೂರು ಇವರು, ಶಾಲಾ ಸಂಚಾಲಕರು ಹಾಗೂ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಧ್ವOರೋಹಣ ನೆರವೇರಿಸಿದರು.

ಶಾಲಾ ವಿದ್ಯಾರ್ಥಿಗಳು ಧ್ವಜಗೀತೆಯನ್ನು ಹಾಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು –“ ನಿರ್ಣಾಯಕ ಸ್ವಾತಂತ್ರ್ಯ ಹಾಗೂ
ವೈಚಾರಿಕ ಸ್ವಾತಂತ್ರ್ಯ ಇವುಗಳನ್ನು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕು ಏಕೆಂದರೆ ಅವರ ನಿರ್ಣಯಗಳು ಮತ್ತು ವಿಚಾರಗಳು ಮುಂದಿನ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು
ಹಾಕುತ್ತವೆ” ಎಂದು ತಿಳಿಸಿದ ಸ್ವತಃ ಗಾಯಕರು ಹಾಗೂ ಗಿಟಾರ್‌ ವಾದಕರಾದ ಡಾ| ಕಾರ್ತಿಕ್ ತಮ್ಮ
ಪ್ರತಿಭೆಯನ್ನು ತೋರಿಸುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಎಷ್ಟು
ಅಗತ್ಯ ಎಂಬುದನ್ನು ಮನವರಿಕೆ ಮಾಡಿದರು.

ಏಕತಾವತೆಯನ್ನು ಹೋಗಲಾಡಿಸಿ ಜೀವನೋತ್ಸಾಹ
ಮೂಡಿಸುತ್ತದೆ ಎಂಬ ವಿಚಾರವನ್ನು ಮಕ್ಕಳಿಗೆ ಮನದಟ್ಟು ಮಾಡಿದರು. ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಧನ, ತೀರಿಸುವೆನು ಅದರ ಋಣ ಈ ಒಂದೇ ಜನ್ಮದಿ” ಎಂಬ ಚೆನ್ನವೀರ ಕಣವಿಯವರ ಮಾತುಗಳನ್ನು ನೆನೆಸುತ್ತಾ ಮಕ್ಕಳಿಗೆ ದೇಶ ಪ್ರೇಮದ ಸಂದೇಶವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳು ಸಮೂಹ ದೇಶಭಕ್ತಿಗೀತೆ, ದೇಶಭಕ್ತಿಯ ನೃತ್ಯಗಳು, ಹಾಗೂ ಸ್ವಾತಂತ್ರ್ಯ ವೀರರ ವೇಷಗಳ ಪ್ರದರ್ಶನ ನೀಡಿ ರಾಷ್ಟ್ರ ಭಕ್ತಿಯ ಸಂದೇಶವನ್ನು ಸಾರಿದರು.

ಶಾಲಾ ಪ್ರಾಂಶುಪಾಲರಾದ ದೇಚಮ್ಮ ಟಿ.ಎಮ್‌ ಮಾತನಾಡಿ – “ ಮಹಾತ್ಮ ಗಾಂಧೀಜಿ, ‌ ಅಂಬೇಡ್ಕರ್‌ ರವರ ಚಿಂತನೆಗಳನ್ನು ಉಲ್ಲೇಖಿಸಿ ದೊರೆತ ಸ್ವಾಂತ್ರ್ಯದ ಜೊತೆಗೆ ಸ್ವಾಭಿಮಾನ ,
ಆಶಾವಾದ ಮತ್ತು ಉನ್ನತ ಗುರಿಯನ್ನು ಸಾಧಿಸುವ ಛಲದೊಂದಿಗೆ ಮುನ್ನುಗ್ಗಿ ಭಾರತವನ್ನು
ಉನ್ನತ್ಯಕ್ಕೇರಿಸಿ” ಎಂಬ ಸಂದೇಶವನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿನಿ ಇಂಚರಾ ಪಾರೆ ಮಾತನಾಡಿ ಅನೇಕತೆಯಲ್ಲಿ ಏಕತೆಯನ್ನು ಸಾರುವ ಭಾರತದ ವಿಶೇಷತೆಯನ್ನು ವಿವರಿಸಿದರು . ವಿದ್ಯಾರ್ಥಿ ಅಹನ್‌ ವೆಂಕಟ್‌ ಸ್ವಾಗತಿಸಿ , ಅಕ್ಷರ್‌ .ಪಿ
ವಂದನಾರ್ಪಣೆಗೈದರು . ಶಾಲಾ ವಿದ್ಯಾಥಿðನಿಯರಾದ ಕು. ಆಪ್ತಿಲಕ್ಮಿ ನೆಟ್ಟಾರ್‌ ಹಾಗೂ
ಕು. ಆಟಪ್ತಿ ಬಿ.ಯಸ್ ಕಾರ್ಯಕ್ರಮವನ್ನು ನಿರೂಪಿಸಿದರು , ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.