ಜಾಲ್ಸೂರು ಗ್ರಾಮದ ಸೋಣಂಗೇರಿ ಅಂಗನವಾಡಿ ಶಾಲೆಯು ಇತ್ತೀಚಿಗೆ ಸುರಿದ ಮಳೆಯಿಂದಾಗಿ ಜಲಾವೃತ ಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗಿಲ್ಲ.
ಪ್ರತಿ ಬಾರಿಯೂ ಮಿತ್ರ ಬಳಗ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಹಯೋಗದೊಂದಿಗೆ ಆಚರಣೆಯು ನಡೆಸಲಾಗುತ್ತಿತ್ತು.
ವ್ಯವಹಾರಿಕವಾಗಿ ಬೆಳೆದಿರುವ
ಸೋಣಂಗೇರಿ ಅಂಗನವಾಡಿ ಶಾಲೆಯಲ್ಲಿ ಹಲವಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು , ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡದಿರುವ ಕುರಿತು ಸ್ಥಳೀಯ ಆಡಳಿತ ವ್ಯವಸ್ಥೆಯ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.