ಕಂದ್ರಪ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರಶೇಖರ್ ಕೆ.ರವರು ನಡೆಸಿಕೊಟ್ಟರು.

ಶಾಲೆಯ ಮುಖ್ಯ ಗುರುಗಳಾದ ವಾಣಿ ಕೆ.ಎಸ್.ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ತರಗತಿವಾರು ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗೆ‌ ರೂ. 1000 ದತ್ತಿ ನಿಧಿಯನ್ನು ಸುಕುಮಾರ ಕಂದ್ರಪ್ಪಾಡಿ ಅಮೇರಿಕಾದ ಪ್ರತಿಷ್ಟಿತ ಪಾಲೋಮಾರ್ ಟೆಕ್ನಾಲಜೀಸ್ ನಲ್ಲಿ ದಕ್ಷಿಣ ಎಷ್ಯಾದ ಸರ್ವಿಸ್ ಇಂಜಿನಿಯರ್ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಇವರು ನೀಡಿದರು. ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳ ಛದ್ಮವೇಷವನ್ನು ಧರಿಸಿದ್ದರು.

ಕಾರ್ಯಕ್ರಮದಲ್ಲಿ ದೇವಚಳ್ಳ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೀತಂ ಮುಂಡೋಡಿ , ಹಿರಿಯ ವಿದ್ಯಾರ್ಥಿ ಓಂ ಪ್ರಕಾಶ್ ಮುಂಡೋಡಿ ಮತ್ತು ಮೋಹನ ಕುಮಾರ್ ಪೊಯ್ಯಮಜಲು ಮ್ಯಾನೇಜರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕ, ವಿನೋದ್ ಕುಮಾರ್ ಮುಂಡೋಡಿ , ಎಸ್.ಡಿ.ಎಂ.ಸಿ ಯ ಮಾಜಿ ಅಧ್ಯಕ್ಷರಾದ ಪುರುಷೋತ್ತಮ ಮುಂಡೋಡಿ, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ವಾಣಿ ಎಂ.ವಿ. ಹಾಗೂ ಎಸ್‌.ಡಿ.ಎಂ.ಸಿಯ ಎಲ್ಲಾ ಸದಸ್ಯರು ಮತ್ತು ಪೋಷಕರು ಹಿರಿಯ ನಾಗರಿಕರು ಮತ್ತು ಅಂಗನವಾಡಿ ಸಹಾಯಕಿ ಅಂಗನವಾಡಿಯ ಪುಟಾಣಿ ಮಕ್ಕಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಂತರ ವಿವಿಧ ಘೋಷಣೆಗಳೊಂದಿಗೆ ಮಕ್ಕಳು ಪೋಷಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರರ ವೇಷ ಧರಿಸಿ ಊರಿನವರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಕಾರ್ಯಕ್ರಮವನ್ನು ಸಹ ಶಿಕ್ಷಕಿ ಆಶಾರಾಣಿ ಹೆಚ್.ಸಿ. ನಿರೂಪಿಸಿ, ಗೌರವ ಶಿಕ್ಷಕಿ ಕವಿತಾ ವಂದಿಸಿದರು.