ಕಲ್ಮಕಾರು ಶಾಲೆಯಲ್ಲಿ ವನಮಹೋತ್ಸವ, ಹಣ್ಣಿನ ಗಿಡ ವಿತರಣೆ

0

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆ ಮತ್ತು ಕಲ್ಮಕಾರು ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಜಂಟಿ ಆಶಯದಲ್ಲಿ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮವು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ ಆ.15 ರಂದು ನೆರವೇರಿಸಿದರು.

ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಾದ ವಿಮಲ್ ಬಾಬು ಅವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸುಬ್ರಹ್ಮಣ್ಯ ಲಯನ್ಸ್ ಅಧ್ಯಕ್ಷರಾದ ರಾಜೇಶ್ ಎನ್ ಎಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಗುರುಗಳಾದ ಮಾಲಿನಿ ಕೆ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿವ್ಯ ಮೆದುಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ, ಊರಿನ ಹಿರಿಯರಾದ ಉಮೇಶ್ ಬಿಳಿಮಲೆ, ಯಶವಂತ ಬಿಳಿಮಲೆ ಮತ್ತು ಎಸ್.ಡಿ.ಎಂ..ಸಿಯ ಮಾಜಿ ಅಧ್ಯಕ್ಷರುಗಳಾದ ರಾಧಾಕೃಷ್ಣ ಬಿಲ್ಲಾರ ಮಜಲು, ಗಣೇಶ್ ಭಟ್ ಇಡ್ಯಡ್ಕ ಹಾಗೂ ಶಿವಾನಂದ ಬಿಳಿಮಲೆ ಮತ್ತು ದತಿನಿದಿ ದಾನಿಗಳಾದ ಧರ್ಮರಾಜ ಕೆಪಿ, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಸುಮ ಸುಲೋಚನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಪ್ರೊಫೆಸರ್ ಕೆ ರಂಗಯ್ಯ ಶೆಟ್ಟಿಗಾರ್ ಪ್ರಾಸ್ತವಿಕ ಮಾತುಗಳಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಬಾಳುಗೋಡು ಇವರು ಸ್ವಾಗತಿಸಿದರು, ಲೋಕೇಶ್ ಬಿ.ಎನ್ ವಂದಿಸಿದರು. ದೀಪಕ್ ಎಚ್ ಪಿ, ದಿನೇಶ್ ಮೊಗ್ರ ಇದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕೊಡ ಮಾಡಿದ 30 ಟ್ರೀ ಗಾರ್ಡ್ ನ್ನು ಹಣ್ಣಿನ ಗಿಡಗಳಿಗೆ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರು ವಿದ್ಯಾರ್ಥಿಗಳ ಪೋಷಕರು ಹಾಗೂ ದಾನಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.