ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಂದ ತಹಶೀಲ್ದಾರ್ ಭೇಟಿ – ಮನವಿ ಸಲ್ಲಿಕೆ
ಜಂಟಿ ಸರ್ವೆ ನಡೆಸಲು ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ ತಹಶೀಲ್ದಾರ್
ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಇದರ ಪದಾಧಿಕಾರಿಗಳು ಸುಳ್ಯ ತಹಸೀಲ್ದಾರ್ ಮಂಜುನಾಥ್ ರವರನ್ನು ಭೇಟಿಯಾಗಿ ತೊಡಿಕಾನ ಗ್ರಾಮದಲ್ಲಿ ಅರಣ್ಯ ಇಲಾಖೆ ಗೂಗಲ್ ಸರ್ವೆ ನಡೆಸಿ ಗುಪ್ಪೆ ಅಳವಡಿಸಿದ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದರು.
ಅರಣ್ಯ ಇಲಾಖೆ ರೈತರಿಗೆ ನೋಟಿಸ್ ನೀಡದೆ ತಾಲೂಕು ಕಂದಾಯ ಇಲಾಖೆಯ ಅನುಮತಿ ಪಡೆಯದೇ ಈಗಾಗಲೇ ಮಂಜೂರಾಗಿ 20 ವರ್ಷ ಕಳೆದ ಹಕ್ಕು ಪತ್ರ, ಪಹಣಿಯಲ್ಲಿ ನಮೂದಾಗಿರುವ ಸರಕಾರದ ಆಸ್ತಿಯೆಂದು ಗೂಗಲ್ ಸರ್ವೆ ಸಿಂಧುವಲ್ಲವೆಂದು ನೂರಕ್ಕೂ ಹೆಚ್ಚು ವಾಸ್ತವ್ಯವಿರುವ ರೈತರಿಗೆ ತೊಂದರೆ ಕೊಟ್ಟ ಬಗ್ಗೆ ತಿಳಿಸಲಾಯಿತು.
ಇದಕ್ಕೆ ತಹಸೀಲ್ದಾರ್ ಅವರು ಜಂಟಿ ಸರ್ವೆ ನಡೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ವಿವರವಾದ ಅರ್ಜಿಯನ್ನು ನೀಡಲು ತಿಳಿಸಿದರು.
ಭೇಟಿ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಕಾರ್ಯದರ್ಶಿ ಭರತ್ ಕುಮಾರ್, ಮಾಧವ ಗೌಡ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ, ದ. ಕ. ಸಂಪಾಜೆ ಅಧ್ಯಕ್ಷ ವಸಂತ ಪೆಲತ್ತಡ್ಕ, ಸುರೇಶ್ ಭಟ್ ಕೊಜಂಬೆ, ಅಮರನಾಥ್ ಆಳ್ವ ಮತ್ತು ತೊಡಿಕಾನ ಗ್ರಾಮದಲ್ಲಿ ತೊಂದರೆಗೆ ಒಳಗಾದ ರೈತರು ಇದ್ದರು.