ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಐರ್ವನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ
ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಪಾಲೆಪ್ಪಾಡಿ ಐವರ್ನಾಡು ಮತ್ತು ಮಂಜುಶ್ರೀ ಯುವತಿ ಮಂಡಲ ಪಾಲೆಪ್ಪಾಡಿ ಐವರ್ನಾಡುವ ಇದರ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.16 ರಂದು ನಡೆಯಿತು. ಗಿರೀಶ್ ಅಸ್ರಣ್ಣರವರ ಪೌರೋಹಿತ್ಯದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ತಾರಾ ರಾಜರಾಮರಾವ್ ದಂಪತಿಗಳ ಮುಖ್ಯ ಕತೃತ್ವ ದಲ್ಲಿ ಗ್ರಾಮದ ಅನೇಕ ಮುತ್ತೈದೆಯರು ಸೇವಾತೃಗಳಾಗಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.


ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಇಂದುಮತಿ ಕಟ್ಟತ್ತಾರು, ಕಾರ್ಯದರ್ಶಿ ಅಮಿತಾ ಲಾವಂತಡ್ಕ, ಸದಸ್ಯರುಗಳಾದ ಮಮತಾ ಉದ್ದಂಪಾಡಿ ,ರೇಖಾ ಉದ್ದಂಪಾಡಿ ,ಶಿವಶಾಂತಿ ಪಾಲೆಪ್ಪಾಡಿ, ಶೋಭಾ ಲಾವಂತಡ್ಕ, ಹೇಮಲತಾ ಉದ್ದಂಪಾಡಿ, ಹೇಮಲತಾ ಪಾಲೆಪ್ಪಾಡಿ, ಲಿಖಿತಾ ಪಾಲೆಪ್ಪಾಡಿ, ಸೌಮ್ಯ ಪಾಲೆಪ್ಪಾಡಿ, ನಳಿನಿ ಪಾಲೆಪ್ಪಾಡಿ, ವನಿತಾ ದರ್ಖಾಸ್ತು, ಸರಸ್ವತಿ ಉದ್ದಂಪಾಡಿ, ಮಾಲತಿ ಉದ್ದಂಪಾಡಿ ,ಅನುಶ್ರೀ ಕಟ್ಟತ್ತಾರು ಮುಂತಾದವರು ಪೂಜಾ ಕಾರ್ಯಗಳಲ್ಲಿ ಸಹಕರಿಸಿದರು. ಪೂಜಾ ಭೋಜನ ಪ್ರಸಾದವನ್ನು ರಾಮಕೃಷ್ಣ ಭಟ್ಟ ಅಜ್ಜಮೂಲೆ ತಯಾರಿಸಿಕೊಟ್ಟರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲರವರು ಉಪಸ್ಥಿತರಿದ್ದರು .ದೇವಸ್ಥಾನದ ಕಚೇರಿ ,ನಿರ್ವಾಹಕ ಯಶವಂತ ಬಾರೆತ್ತಡ್ಕ ಮತ್ತು ಊರ ಯುವಕರು ಸರ್ವ ಕಾರ್ಯಗಳಲ್ಲಿ ಸಹಕರಿಸಿದರು.