ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಶ್ರಾವಣ ಶನಿವಾರ

0

ಸುಳ್ಯಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಆ. 17 ರಂದು ವಿಶೇಷ ಪೂಜೆ, ಭಜನೆ ನಡೆಯಿತು.
ವರ್ಷದ ಪ್ರಥಮ ಸೋಣ ಶನಿವಾರದ ಪ್ರಯುಕ್ತ ಸೀಮೆ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.


ತೊಡಿಕಾನದ ಶಿವಶಂಕರಿ ಭಜನಾ ಮಂಡಳಿ ಹಾಗೂ ಶ್ರೀ ಮಂಜುನಾಥ ಭಜನಾ ಮಂಡಳಿ ಬೆಟ್ಟಂಪಾಡಿ ಅವರಿಂದ ಭಜನಾ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರುಗಳು ದೇವಾಲಯದ ಸಿಬ್ಬಂದಿಗಳು ಹಾಗೂ ಭಕ್ತಾದಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಅನ್ನಪ್ರಸಾದ ಸ್ವೀಕರಿಸಿದರು.