ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಅಂತರ್ ಶಾಲಾ ಗುಡ್ಡಗಾಡು ಓಟ

0

ಸಿಬಿಎಸ್ ಸಿ ಶಾಲೆಗಳ ಅಂತರ್ ಶಾಲಾ AICS ಗುಡ್ಡಗಾಡು ಓಟವು ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಇಲ್ಲಿ ಆ. 17ರಂದು ನಡೆಯಿತು. ಶಾಲಾ ಸಂಚಾಲಕರಾದ ಎಂ.ಪಿ.ಉಮೇಶ್ ಹಸಿರು ನಿಶಾನೆ ತೋರಿಸುವುದರ ಮುಖಾಂತರ ಓಟಕ್ಕೆ ಚಾಲನೆ ನೀಡಿದರು.


ಹದಿನೇಳು ವರ್ಷ ಒಳಗಿನ ಮತ್ತು ಹದಿನಾಲ್ಕು ವರ್ಷದ ಒಳಗಿನ ಎರಡು ಹಂತಗಳಲ್ಲಿ ಹದಿನೆಂಟು ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ ಕ್ರಮವಾಗಿ ಆರು ಕಿಲೋಮೀಟರ್( ಸೀನಿಯರ್ ಕೆಟಗರಿ), ನಾಲ್ಕು ಕಿಲೋಮೀಟರ್ ಮತ್ತು ಮೂರು ಕಿಲೋಮೀಟರ್ (ಜೂನಿಯರ್ ಕೆಟಗರಿ) ದೂರವನ್ನು ಕ್ರಮಿಸಿದರು.


ಹದಿನೇಳು ವರ್ಷದ ಕೆಳಗಿನ ಹುಡುಗರ ವಿಭಾಗದಲ್ಲಿ ಲಿತೀಶ್ ಆರ್ -ಆಳ್ವಾಸ್ ಸ್ಕೂಲ್, ಶ್ರೀಶಾಂತ್ – ಸತ್ಯಸಾಯಿ ಅಳಿಕೆ, ಜೊಹಾನ್ ಗ್ಲಾಡ್ಸನ್- ಮೌಂಟ್ ಕಾರ್ಮೆಲ್ ಮಿಲಾಗ್ರಿಸ್, ಮಧುಸೂದನ್ .ಪಿ.- ಆಳ್ವಾಸ್ ಸೆಂಟ್ರಲ್ ಸ್ಕೂಲ್, ಲಾರೆನ್ ಪ್ರೀತ್ ಸಿಕ್ವೆರಾ, ಶ್ರೇಯಸ್ ಆರ್.ಮೌಂಟ್ ಕಾರ್ಮೆಲ್ ಮಂಗಳೂರು ಇವರು ಕ್ರಮವಾಗಿ ಒಂದರಿಂದ ಆರನೇ ಸ್ಥಾನಕ್ಕೆ ಅರ್ಹತೆ ಪಡೆದರು.


ಸೀನಿಯರ್ ವಿದ್ಯಾರ್ಥಿನಿಯರಲ್ಲಿ – ಅವನಿ ಜಿ.ಎಮ್ ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದಿರೆ, ತಾನ್ಯ ಪಿ – ಬಿ.ಜಿ.ಎಸ್ ಎಜುಕೇಶನ್ ಕಾವೂರು, ಸ್ಪೂರ್ತಿ ಆಳ್ವಾಸ್ ಸೆಂಟ್ರಲ್ ಸ್ಕೂಲ್, ವಿದ್ಯಾಶ್ರೀ ಆಳ್ವಾಸ್ ಮೂಡಬಿದಿರೆ, ಅನಿಕಾ ಎಸ್. ಬಿ ಡೆಲ್ಲಿ ಪಬ್ಲಿಕ್ ಸ್ಕೂಲ್ MRPL Mangalore, ಸಮೃದ್ಧಿ ಬಿ.ಜಿ.ಎಸ್ ಎಜುಕೇಶನ್ ಕಾವೂರು ಇವರು ಕ್ರಮವಾಗಿ ಒಂದರಿಂದ ಆರನೇ ಸ್ಥಾನಗಳನ್ನು ಪಡೆದರು.
ಹದಿನಾಲ್ಕು ವರ್ಷದ ಕೆಳಗಿನ ಹಂತದಲ್ಲಿ ಮಫಾಝ್ ಅಬ್ಧುಲ್ ರೆಹಮಾನ್ ಕಣಚೂರ್ ಪಬ್ಲಿಕ್ ಸ್ಕೂಲ್, ಪಿ. ಶಾಲೋಮ್ ಕ್ರಿಸ್ಟನ್ – ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮಂಗಳೂರು, ಆದಿತ್ಯ ಆರ್ . ಆಳ್ವಾಸ್ ಮೂಡಬಿದಿರೆ, ಸಿಯೋನ್ ರಾಜ್ -ಎಸ್ ಡಿ ಎಮ್ ಸ್ಕೂಲ್ ಉಜಿರೆ. ಆಲ್ಡ್ರಿಚ್ ಶೌನ್ ಡಿಸೋಜಾ – ಮೌಂಟ್ ಕಾರ್ಮೆಲ್ ಸ್ಕೂಲ್ ಮಂಗಳೂರು, ಡೇನಿಶ್ ಅಲ್ ಫರ್ಕನ್ ಇಸ್ಲಾಮಿಕ್ ಶಾಲೆ ಪುತ್ತಿಗೆ ಮೂಡಬಿದರೆ ಕ್ರಮವಾಗಿ ಒಂದರಿಂದ ಆರನೇ ಸ್ಥಾನಗಳಿಗಳನ್ನು ಪಡೆದುಕೊಂಡರು.


ಇದೇ ಹಂತದಲ್ಲಿ ವಿದ್ಯಾರ್ಥಿನಿಯರಾದ- ಜೆಸಿನಾ ಕೊರಿಯಾ ಮೌಂಟ್ ಕಾರ್ಮೆಲ್ ಮಂಗಳೂರು, ದಿಶಾ ಎಮ್ ಎನ್ ಆಳ್ವಾಸ್ ಸೆಂಟ್ರಲ್ ಸ್ಕೂಲ್, ರಿಯಾ ಶಾ ಡೆಲ್ಲಿ ಪಬ್ಲಿಕ್ ಸ್ಕೂಲ್ MRPL ಮಂಗಳೂರು, ನಿಶಾ ಎಸ್ ಡಿ ಎಮ್ ಉಜಿರೆ, ಸಾನ್ನಿಧ್ಯ ಡಿ.ವಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ, ನಿತ್ಯಶ್ರೀ ಕೆ.ಎಸ್ ಶಾರದಾ ವಿದ್ಯಾನಿಕೇತನ ದೇವಿನಗರ ತಲಪಾಡಿ, ಇವರು ಕ್ರಮವಾಗಿ ಒಂದರಿಂದ ಆರನೇ ಸ್ಥಾನಗಳಲ್ಲಿ ಪಡೆದುಕೊಂಡರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅಂತರಾಷ್ಟ್ರೀಯ ಮ್ಯಾರಥಾನ್ ಓಟಗಾರ ಕ್ಯಾಪ್ಟನ್ ಎನ್ ಚಿನ್ನಪ್ಪ ಮಾತನಾಡಿ ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ತಮ್ಮ ಜೀವಮಾನದಲ್ಲಿ ಏನನ್ನಾದರೂ ಸಾಧಿಸುವ ಛಲವಿರಬೇಕು ಎಂದು ನುಡಿಯುತ್ತಾ ತಮ್ಮ ಸ್ವತ ಸಾಧನೆಗಳನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.


ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರು ಎಂ.ಪಿ.ಉಮೇಶ್, ಪ್ರಾಂಶುಪಾಲೆ ಟಿ.ಎಮ್ ದೇಚಮ್ಮ, ಮುಖ್ಯ ಅತಿಥಿ ಎನ್ ಚಿನ್ನಪ್ಪ, ಟೆಕ್ನಿಕಲ್ ಮ್ಯಾರಥಾನ್ ಡೈರೆಕ್ಟರ್ ರವಿಶಂಕರ್ ಭಟ್, ಶಾಲಾ ದೈಹಿಕ ಶಿಕ್ಷಕ ಜಯಪ್ರಕಾಶ್ ಬಹುಮಾನ ವಿತರಿಸಿದರು. ಶಾಲಾಪ್ರಾಂಶುಪಾಲೆ ಟಿ.ಎಮ್ ದೇಚಮ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಗೀತಾಮಣಿ ಸ್ವಾಗತಿಸಿ, ಶ್ರೀಮತಿ ರೇಶ್ಮಾ ವಂದಿಸಿದರು. ಶಿಕ್ಷಕಿ ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.