ಕೊಡಗು ಸಂಪಾಜೆ : ಕೃಷಿ ತೋಟಗಳಿಗೆ ಕಾಡಾನೆ ದಾಳಿ – ಕೃಷಿ ನಾಶ

0

ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಕೃಷಿ ನಾಶವಾದ ಘಟನೆ ಆ 18ರಂದು ಸಂಭವಿಸಿದೆ.

ಚಡಾವಿನ ಹರೀಶ ಅವರ ಕೃಷಿ ತೋಟಕ್ಕೆ ಆನೆಗಳ ಹಿಂಡು ತೋಟಗಳಿಗೆ ದಾಳಿ‌ ನಡೆಸಿ ಅಡಿಕೆ, ತೆಂಗು , ಬಾಳೆ ಗಿಡಗಳನ್ನು ಸಂಪೂರ್ಣ ನಾಶ ಪಡಿಸಿದೆ.

ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿ ನಾಶ ಮಾಡುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ.