ತೊಡಿಕಾನ ಗ್ರಾಮದ ಕಾಡುಪಂಜ ಶಿವಣ್ಣ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.16ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಶಿವಣ್ಣ ಗೌಡರಿಗೆ ಹಲವು ಸಮಯಗಳ ಹಿಂದೆ ಪಾರ್ಶುವಾಯು ಕಾಯಿಲೆಯಿದ್ದು, ಔಷಧಿ ಪಡೆದು ಗುಣಮುಖರಾಗಿದ್ದರು. ಇತ್ತೀಚೆಗೆ ಮನೆಯಲ್ಲಿ ಬಿದ್ದು, ಕಾಲಿಗೆ ಏಟಾಗಿ ಗುಣಮುಖರಾಗುತ್ತಾ ಬರುತ್ತಿತ್ತೆನ್ನಲಾಗಿದೆ. ಆದರೆ ಆ.16ರಂದು ಸಂಜೆ ತೀವ್ರ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಮೃತರು ಪತ್ನಿ ಲೀಲಾವತಿ, ಪುತ್ರರಾದ ಮನೋಜ್, ಸುನಿಲ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.