ಆಸ್ಟ್ರೇಲಿಯದಲ್ಲಿ ನಡೆಯುವ ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್‌ ಶಿಪ್‌ಗೆ ದಿಗಂತ್ ವಿ ಎಸ್ ಆಯ್ಕೆ

0

ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಈಜುಪಟು ದಿಗಂತ್ ವಿ.ಎಸ್ ಭಾರತ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ.

ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ(ಆರ್‌ಎಲ್‌ಎಸ್‌ಎಸ್) ವತಿಯಿಂದ ನಡೆದ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಈಜುಪಟುಗಳಾದ ದಿಗಂತ್ ವಿ.ಎಸ್‌ರವರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಇವರು ಎಸ್‌‌.ಸಿ.ಡಿ.ಸಿ.ಸಿ ಬ್ಯಾಂಕ್‌ ಕುಂಬ್ರ ಶಾಖಾ ವ್ಯವಸ್ಥಾಪಕ ಕೂರ್ನಡ್ಕದ ವಿಶ್ವನಾಥ ಎಸ್‌ ಮತ್ತು ಪುತ್ತೂರು ಕ್ಯಾಂಪ್ಕೂ ಚಾಕಲೇಟ್ ಫ್ಯಾಕ್ಟರಿಯ ಹಿರಿಯ ವ್ಯವಸ್ಥಾಪಕಿ ವೀಣಾ ಕುಮಾರಿ ಕೆ ದಂಪತಿ ಪುತ್ರ.

ಮೂಲತ: ಅವರು ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆಯವರು. ಇದೀಗ ಚೆನೈ ನಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದು, ಆ.27 ರಿಂದ ಸೆ.2 ತನಕ ಆಸ್ಟ್ರೇಲಿಯದ ಕ್ವಿನ್ಸ್‌ಲ್ಯಾಂಡ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಲಿದೆ.

ಪರ್ಲಡ್ಕ ಬಾಲವನದ ಈಜುಕೊಳದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಹಿರಿಯ ತರಬೇತುದಾರ ಪಾರ್ಥವಾರಣಾಸಿ, ನಿರೂಪ್ ಜಿ.ಆರ್., ರೋಹಿತ್ ಪಿ. ಹಾಗೂ ದೀಕ್ಷಿತ್‌ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.