ಸಹಾಯಕ ಜೈಲರ್ ಪುಟ್ಟಣ್ಣ ಆಚಾರ್ಯರಿಗೆ ಮುಖ್ಯಮಂತ್ರಿ ಚಿನ್ನದ ಪದಕ

0

ಹಾಸನದ ಜಿಲ್ಲಾ ಕಾರಾಗೃಹದಲ್ಲಿ ಸಹಾಯಕ ಜೈಲರ್ ಆಗಿರುವ ಮುರುಳ್ಯ ಗ್ರಾಮದ ಪೂದೆ ನಿವಾಸಿ ಪಿ.ಪುಟ್ಟಣ್ಣ ಆಚಾರ್ಯರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ. ಆ.೧೫ರಂದು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಪದಕ ವಿತರಿಸಿದರು. ಕಾರಾಗೃಹದ ನಿರ್ವಹಣೆ, ಬಂಧಿಗಳ ಭದ್ರತೆ, ಮನಪರಿವರ್ತನೆ, ಗುಪ್ತ ಮಾಹಿತಿ ಮೊದಲಾದ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಸರಕಾರವು ಈ ಚಿನ್ನದ ಪದಕ ನೀಡಿದೆ.


ಪೂದೆ ಮನವಳಿಕೆ ದಿ. ಗಂಗಯ್ಯ ಆಚಾರಿ – ಶ್ರೀಮತಿ ಚಂದ್ರಾವತಿ ದಂಪತಿಯ ಪುತ್ರರಾದ ಪುಟ್ಟಣ್ಣರು ೨೯ ವರ್ಷಗಳಿಂದ ಕಾರಾಗೃಹ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ಕುಸುಮಾವತಿ ಕಾಣಿಯೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಾರೆ. ಮಕ್ಕಳಾದ ಕು. ಭವಿಷ್ಯ ಪುತ್ತೂರಿನ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ದಿಗಂತ್ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ.