ಬಾಳಿಲ ಗ್ರಾಮದ ಮರೆಂಗಾಲ ಚಿದಾನಂದ ನಾಯಕ್ ಮತ್ತು ಶ್ರೀಮತಿ ಚೈತ್ರ ದಂಪತಿಯ ಪುತ್ರ ಆದರ್ಶ್ ಮರೆಂಗಾಲ ಅಸೌಖ್ಯದಿಂದ ಆ. 19ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 21 ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ, ಓರ್ವ ಸಹೋದರ ಆದಿತ್ಯ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.