ಕೊಲ್ಚಾರು: ಕಾರು ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ

0

ಕೋಲ್ಚಾರು ಸಮೀಪ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರರಿಗೆ ಗಾಯವಾಗಿದ್ದು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿರುವ ಘಟನೆ ತಡವಾಗಿ ತಿಳಿದು ಬಂದಿದೆ.

ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು ಸ್ಕೂಟಿ ಸವಾರ ದೀಕ್ಷಿತ್ ಕೆ ಆರ್ ನೀಡಿರುವ ದೂರಿನಂತೆ, ಸದ್ರಿಯವರು ದಿನಾಂಕ 19.08.2024 ರಂದು ಸಂಜೆ, ಸುಳ್ಯ ಪೇಟೆಗೆ ಅಗತ್ಯ ಕೆಲಸದ ನಿಮಿತ್ತ ಮೋಟಾರ್ ಸೈಕಲ್ ನಂಬ್ರ ಕೆಎ 03 ಜೆಡಿ 0368 ನೇ ದರಲ್ಲಿ ಸವಾರನಾಗಿ ಮತ್ತು ಸಹ ಸವಾರರಾಗಿ ಶಶಾಂಕ್ ಕೆ ಎಂಬುವವರೊಂದಿಗೆ ಕೋಲ್ಚಾರು ಎಂಬಲ್ಲಿ ತೆರಳುತ್ತಿದ್ದಾಗ, ಬಂದಡ್ಕ ಕಡೆಯಿಂದ ಸುಳ್ಯ ಕಡೆಗೆ ಸ್ಯಾಂಟ್ರೋ ಕಾರು ನಂಬ್ರ ಕೆಎ 19 ಎಮ್ ಬಿ 5499 ಅತೀ ವೇಗ ಹಾಗೂ ಅಜಾರುಕತೆಯಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ನಾನು ಹಾಗೂ ಹಿಂಬದಿ ಸವಾರನು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರು ಗಾಯಾಳುಗಳನ್ನು ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಕ್ರ ನಂ: 101/2024 ಕಲಂ: 281,125(a) BNS ರಂತೆ ಪ್ರಕರಣ ದಾಖಲಾಗಿದೆ.

ಕಾರು ಚಾಲಕ ಗಣೇಶ ಎಂಬುವವರು ಕೂಡ ಪ್ರತಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಘಟನೆಯಿಂದ ಕಾರಿನ ಮುಂಭಾಗ ಜಖಂ ಗೊಂಡಿದ್ದು ಸ್ಕೂಟಿ ವಾಹನ ಸಂಪೂರ್ಣ ನಜ್ಜು ಗುಜ್ಜು ಆಗಿದೆ.