ಚಾರ್ಜಿಗಿಟ್ಟ ಮೊಬೈಲ್ ಕಳ್ಳತನಕ್ಕೆ ಯತ್ನ

0

ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದ ಘಟನೆ
ಕಾಲೇಜ್ ವಿದ್ಯಾರ್ಥಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಚಾರ್ಜಿಂಗ್‌ಗೆ ಇಟ್ಟಿದ್ದ ಮೊಬೈಲ್ ಫೋನ್ ಕಳ್ಳತನಕ್ಕೆ ಮುಂದಾದ ವ್ಯಕ್ತಿಯನ್ನು ಕಾಲೇಜ್ ವಿದ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ನಡೆದಿದೆ.


ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಓರ್ವ ವಿಧ್ಯಾರ್ಥಿ ತನ್ನ ಮೊಬೈಲ್ ನ್ನು ಸುಳ್ಯದ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಚಾರ್ಜಿಗೆಂದು ಇಟ್ಟಿದ್ದರು ಎನ್ನಲಾಗಿದೆ.


ಈ ವೇಳೆ ಮೊಬೈಲ್ ಫೋನ್ ಇಟ್ಟ ಸ್ಥಳದಲ್ಲಿ ಓರ್ವ ವ್ಯಕ್ತಿ ಸಂಶಯಾಷ್ಪದ ವಾಗಿ ನಿತ್ತಿರುವುದನ್ನು ಗಮನಿಸಿದ ವಿಧ್ಯಾರ್ಥಿಗಳು ಆತನ ಚಲನ ವಲನವನ್ನು ಮೊಬೈಲ್ ವಿಡಿಯೋ ಮಾಡಿ ಸೆರೆ ಹಿಡಿದಿದ್ದಾರೆ.


ಈ ಸಂದರ್ಭ ಆತ ಮೊಬೈಲ್ ಚಾರ್ಜಿಂಗ್ ಸೋಕೆಟ್‌ನಿಂದ ಕಿತ್ತು ಫೋನ್ ಜೇಬಿಗೆ ಹಾಕುವ ವೇಳೆ ವಿಧ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಳಿಕ ವಿಚಾರಿಸಿದಾಗ ವಿದ್ಯಾರ್ಥಿಗಳ ಪ್ರಶ್ನೆಗೆ ಆತ ಕಕ್ಕಾ ಬಿಕ್ಕಿಯಾದ.


ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೊನ್ ಅಥವಾ ಇನ್ನಿತರ ಲಗೇಜ್ ಇಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ. ಈ ಬಗ್ಗೆ ಸಾರಿಗೆ ಇಲಾಖೆಯೂ ಕೂಡ ಪ್ರಕಟಣೆಗಳನ್ನು ನೀಡುತ್ತಿದೆ.