ಕೃಷಿ ಪಂಪ್ ಸೆಟ್ ನ ಕೃಷಿ ನೀರಾವರಿ ವಿದ್ಯುತ್ ಸ್ಥಾವರಕ್ಕೆ ಆಧಾರ್ ನಂಬರ್ ಜೋಡಣೆ ಕಾರ್ಯಕ್ರಮ ಪಂಜ ಧರ್ಮ ಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಮೆಸ್ಕಾಂ ಶಾಖಾ ಕಛೇರಿಯಲ್ಲಿ ಆ.23 ರಂದು ಮುಂಜಾನೆ 9.30 ರಿಂದ ಸಂಜೆ 3.30 ರ ತನಕ ನಡೆಯಲಿದೆ.
ಲಭ್ಯವಿರುವ ಸಂಬಂದಪಟ್ಟ ಒಪ್ಪಂದ ಪತ್ರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬರೆದು ಸಹಿ ಮಾಡುವುದು.(ತಾವುಗಳು ಬರುವಾಗ ನೀರಾವರಿಯ ಪಂಪಿನ ನೊಂದಾಯಿತ ಗ್ರಾಹಕರು ಮರಣ ಹೊಂದಿದ್ದಲ್ಲಿ ಅವರ ಮರಣ ಪ್ರಮಾಣ ಪತ್ರ ಮತ್ತು ಆರ್ ಟಿ ಸಿ ಇದ್ದಲ್ಲಿ ಲಗತ್ತಿಸುವುದು.)
ಕೃಷಿ ಪಂಪ್ ಸೆಟ್ ಗ್ರಾಹಕರು ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಪಂಜ ಶಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.