ಆಯಿಷಾ ನಾಗಪಟ್ಟಣ ನಿಧನ

0

ಆಲೆಟ್ಟಿ ಗ್ರಾಮದ ನಾಗಪಟ್ಟಣ ನಿವಾಸಿ ಆಯಿಷಾ ರವರು ಹೃದಯಾಘಾತದಿಂದ ಇದೀಗ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಮಧ್ಯಾಹ್ನ ಮನೆಯಲ್ಲಿ ಕುಳಿತುಕೊಂಡಿರುವ ವೇಳೆಯಲ್ಲಿ ಎದೆ ನೋವಿನಿಂದ ಕುಸಿದು ಬಿದ್ದರು. ತಕ್ಷಣ ಅಲ್ಲಿ ಇದ್ದ ಸ್ಥಳೀಯರಾದ ಉಲ್ಲಾಸ್ ಕುದ್ಕುಳಿ ಯವರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರು.
ಆಸ್ಪತ್ರೆಗೆ ಹೋಗುವ ವೇಳೆಯಲ್ಲಿ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ಪತಿ ಉಸ್ಮಾನ್ ಹಾಗೂ ಓರ್ವ ಪುತ್ರ ಸಲಾಂ, ಸೊಸೆ ಹಾಗೂ ‌ಮೊಮ್ಮಕ್ಕಳನ್ನು ಬಂಧುಗಳನ್ನು ಅಗಲಿದ್ದಾರೆ.