ಎಲಿಮಲೆ ಜುಮಾ ಮಸೀದಿಗೆ ಕಿಡಿಗೇಡಿಗಳಿಂದ ಬೆದರಿಕೆ ಪ್ರಕರಣ :ಕೆ ಎಸ್ ಉಮ್ಮರ್ ಖಂಡನೆ

0

ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ಆ. 22 ರಂದು ರಾತ್ರಿ ಇಬ್ಬರು ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಹೋಗಿರುವ ವಿಷಯ ತುಂಬಾ ಖಂಡನೀಯ ವಾಗಿದೆ.ಸುಳ್ಯದ ಸೌಹಾರ್ದತೆ ಕೆಡಿಸಲು ದುಷ್ಕರ್ಮಿಗಳು ಈ ರೀತಿ ಮಾಡಿರಬಹುದು.

ಈ ದೇಶದಲ್ಲಿ ಅವರವರ ಇಷ್ಟ ಪ್ರಕಾರ ಜೀವನ ನಡೆಸಲು ನಮ್ಮ ಸಂವಿದಾನ ನಮಗೆ ಅವಕಾಶ ಕೊಡುವಾಗ ಟೊಪ್ಪಿ ದರಿಸಿದ ವಿದ್ಯಾರ್ಥಿಗಳನ್ನು ಬೆದರಿಸುದು ಖಂಡನೀಯವಾಗಿದೆ ಆಲ್ಲದೆ ಕೆಲವೇ ದಿನಗಳ ಮೊದಲು ಈ ದೇಶದ ಸರ್ವೋಚ್ಚ ನ್ಯಾಯಾಲಯ ಈಜಾಬ್ ಧರಿಸುವ ಬಗ್ಗೆ ತೀರ್ಪು ಕೊಟ್ಟಿದೆ ಇದನ್ನೆಲ್ಲ ಸಹಿಸದ ಕೆಲವು ವ್ಯಕ್ತಿಗಳು ಒಂದು ಧರ್ಮದ ವಿರುದ್ಧ ಇಂತಹ ಕೃತ್ಯ ನಡೆಸುದನ್ನು ತೀವ್ರ ವಾಗಿ ಖಂಡಿಸುತ್ತೇನೆ ಆದ್ದರಿಂದ ಈ ಘಟನೆ ನಡೆಸಿರುವವರ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳ ಬೇಕೆಂದು ಆಗ್ರಹಿಸುತ್ತೇನೇ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದ ಹಾಗೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯರು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಸಹ ಸಂಚಾಲಕರು ಆದ ಕೆ ಎಸ್ ಉಮ್ಮರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.