ಅಧ್ಯಕ್ಷರಾಗಿ ಸೀತಾರಾಮ ಎಂ.ಬಿ.- ಉಪಾಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಪಿ.ಆರ್.
ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸೀತಾರಾಮ ಎಂ.ಬಿ., ಉಪಾಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಪಿ.ಆರ್. ಆಯ್ಕೆಯಾದರು. ಚುನಾವಣಾಧಿಕಾರಿ ಶಿವಲಿಂಗಯ್ಯನವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಸದಸ್ಯ ಅಶೋಕ್ ಕುಮಾರ್ ರೈ ಸೀತಾರಾಮ ಎಂ. ಬಿ.ಯವರನ್ನು ಅಧ್ಯಕ್ಷರನ್ನಾಗಿ ಸೂಚಿಸಿ, ರಾಮಚಂದ್ರ ನೂಜಾಡಿ ಅನುಮೋದಿಸಿದರು. ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಪಿ. ಆರ್. ರವರನ್ನು ಭವ್ಯ ಬಾಲಕೃಷ್ಣ ಸೂಚಿಸಿ ಜಗನ್ನಾಥ ರೈ ಕೆ. ಅನುಮೋದಿಸಿದರು.
ಪ್ರಮುಖರಾದ ವಸಂತ ನಡುಬೈಲು, ರೂಪರಾಜ ರೈ, ಉಮೇಶ್ ರೈ ಮರವಂಜ ಉಪಸ್ಥಿತರಿದ್ದರು. ಸಿಬ್ಬಂದಿ ಸುಂದರ ಗೌಡ, ಜಸ್ಮಂತ್, ವಿಶ್ವನಾಥ ಎ., ಕಾರ್ಯದರ್ಶಿ ಅಕ್ಷತಾ ಶರತ್ ಕುಮಾರ್ ಸಹಕರಿಸಿದರು. ಉಳಿದವರು ಸದಸ್ಯರಾಗಿದ್ದಾರೆ.