ಜಯನಗರ :ಶ್ರೀ ಗಜಾನನ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ವಿವಿಧ ಆಟೋಟ ಸ್ಪರ್ಧಾ ಕಾರ್ಯಕ್ರಮ ಹಾಗೂ ಮುದ್ದು ಕೃಷ್ಣ ವೇಷ ಸ್ಪರ್ಧೆ

ಜಯನಗರ ಶ್ರೀ ಗಜಾನನ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಮತ್ತು ಹಿರಿಯರಿಗೆ ವಿವಿಧ ಆಟೋ ಸ್ಪರ್ಧೆ,ಮುದ್ದುಕೃಷ್ಣ ವೇಷ ಸ್ಪರ್ಧ ಕಾರ್ಯಕ್ರಮಗಳು ನಡೆಯಿತು.

ಪುರೋಹಿತರಾದ ಶ್ರೀ ಶ್ರೀಹರಿ ಯಳಚಿತ್ತಾಯ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಬಳಿಕ ಅವರು ಸ್ಪರ್ಧ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಕಾಳು ಹೆಕ್ಕುವುದು, ಬಕೇಟಿಗೆ ಬಾಲ್ ಹಾಕುವುದು, ಓಟ, ವಿಕೆಟಿಗೆ ಬಾಲ್ ಎಸೆತ,ಗ್ಲಾಸ್ ನಲ್ಲಿ ಪಿರೋಮಿಡ್ ರಚನೆ, ಮಹಿಳೆಯರಿಗೆ ಬಾಟಲಿಗೆ ನೀರು ತುಂಬಿಸುವುದು, ಸಂಗೀತ ಕುರ್ಚಿ,ಮಡಿಕೆ ಹೊಡೆಯುವುದು, ಕ್ಯಾಂಡಲ್ ಹುರಿಸುವುದು, ರಸಪ್ರಶ್ನೆ, ಹಗ್ಗ ಜಗ್ಗಾಟ, ಪುರುಷರಿಗೆ ಮಡಿಕೆ ಹೊಡೆಯುವುದು,ಕ್ಯಾಂಡಲ್ ಹುರಿಸುವುದು,ರಸಪ್ರಶ್ನೆ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.

ವಿಶೇಷವಾಗಿ ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯ್ಕ್, ಕಾರ್ಯದರ್ಶಿ ಶ್ರೀಮತಿ ಅನುರಾಧ ನಾಗರಾಜ್, ಕೋಶಾಧಿಕಾರಿ ಮಾಧವ, ಮಹಿಳಾ ಸಮಿತಿ ಅಧ್ಯಕ್ಷೆ ಹೇಮಾ ಶಾಂತಪ್ಪ, ಸ್ಥಳೀಯರಾದ ಶಿವನಾಥ್ ರಾವ್, ಪ್ರವೀಣ್ ಕುಮಾರ್ ಎ ಎಂ,ಸುರೇಂದ್ರ ಕಾಮತ್, ಯೋಗೇಶ್ ಆಚಾರ್ಯ, ಪ್ರಸಾದ್ ಎ ಎಸ್ ಭಜನಾ ಮಂದಿರದ ಅರ್ಚಕರಾದ ಅನಂತ ಪ್ರಕಾಶ್, ಸ್ಥಳೀಯ ವಿಕ್ರಮ ಯುವಕ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.

ಆಟೋಟ ಸ್ಪರ್ಧೆಯನ್ನು ಪ್ರವೀಣ್ ಕುಮಾರ್ ಎ ಎಂ, ಸುರೇಂದ್ರ ಕಾಮತ್, ಅಮಿತ್ ಕುಮಾರ್ ಮೊದಲಾದವರು ನಡೆಸಿ ಕೊಟ್ಟರು.