ಗೆಳೆಯರ ಬಳಗ (ರಿ) ದೇವ , ಜ್ಯೋತಿ ಲಕ್ಷ್ಮೀ ಮಹಿಳಾ ಮಂಡಲ (ರಿ) ಇವುಗಳ ಜಂಟಿ ಆಶ್ರಯದಲ್ಲಿ ಆ. 26ರಂದು 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮ ಪ್ರಯುಕ್ತ ಪುರುಷರಿಗೆ ಮೊಸರು ಕುಡಿಕೆ, ಮಹಿಳೆಯರ ಜಾರುಕಂಬ, ಮಕ್ಕಳ ಶ್ರೀ ಕೃಷ್ಣವೇಷ ಸ್ಪರ್ಧೆ ಮನರಂಜಿಸಿತು. ಪುರುಷರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಚಿನ್ನಪ್ಪ ಗೌಡ ದೇವ ನೆರವೇರಿಸಿದರು. ಧಾರ್ಮಿಕ ಉಪನ್ಯಾಸವನ್ನು ಸಂಪಾಜೆ ಹೊರಠಾಣೆಯ ಸಹಾಯಕ ನಿರೀಕ್ಷಕರಾದ ಸುಂದರ ಸುವರ್ಣ ರವರು ನೀಡಿದರು.
ವಿವಿಧ ಸ್ಪರ್ಧಾ ಕಾರ್ಯಕ್ರಮ ಬಳಿಕ ಸಮಾರೋಪ ಹಾಗೂ ಸನ್ಮಾನ ಸಮಾರಂಭ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ ಇಲ್ಲಿ ಕಲಿತು 2023- 24 ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಹಿರಿಯಡ್ಕ ವಹಿಸಿದ್ದರು.
ಈ ಸಂದರ್ಭದಲ್ಲಿ 17 ವರ್ಷಗಳಿಂದ ದೇವ ಶಾಲೆಯಲ್ಲಿ ಶಿಕ್ಷಕರಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಯಪ್ರಕಾಶ್ ಮುತ್ಲಾಜೆ ಹಾಗೂ ಗುತ್ತಿಗಾರು ಮೆಸ್ಕಾಂ ಶಾಲೆಯ ಪವರ್ ಮ್ಯಾನ್ ಸುಧಾಕರ ಪಂಜಿಪಳ್ಳ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ದೇವಚಳ್ಳ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಸೇವಾಜೆ , ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ಚಾರ್ಮತ , ನಿವೃತ್ತ ಶಿಕ್ಷಕ ಕುಶಾಲಪ್ಪ ಮಾಸ್ಟರ್ ಕಂದ್ರಪ್ಪಾಡಿ, ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನ ಕಟ್ಟೆ, ಅಮರ ಸುಳ್ಯ ಸುದ್ದಿ ಸಂಪಾದಕರಾದ ಮುರಳೀಧರ ಅಡ್ಡನಪಾರೆ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಕೆ. ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಲೋಚನಾ ದೇವ , ಗ್ರಾ.ಪಂ. ಸದಸ್ಯ ಹಾಗೂ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು ಮತ್ತು ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾ ಪದ್ಮನಾಭ ದೇವ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಯೋಗೇಶ್ ದೇವ ಸ್ವಾಗತಿಸಿ ,ಉಮೇಶ್ ದೇವ ವಂದಿಸಿದರು, ಕಾರ್ತಿಕ್ ದೇವ ಕಾರ್ಯಕ್ರಮ ನಿರೂಪಿಸಿದರು.