ಸುಳ್ಯ:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ : ದೇಶಭಕ್ತಿ ಗೀತ ಗಾಯನ ಸ್ಪರ್ಧೆ

0

ರೋಟರಿ ವಿದ್ಯಾ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ವತಿಯಿಂದ ಕಬ್,ಬುಲ್-ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ ರೇಂಜರ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ಆ.28 ರಂದು ನಡೆಯಿತು.

ಬೆಳಗ್ಗೆ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ರೊ.ಯೋಗಿತಾ ಗೋಪಿನಾಥ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶಶಿಧರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೊ.ಪ್ರಭಾಕರನ್ ನಾಯರ್, ಆಡಳಿತ ಮಂಡಳಿ ಸದಸ್ಯ ರೊ.ಗಿರಿಜಾಶಂಕರ್ ತುದಿಯಡ್ಕ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಮಮತಾ, ರೋಟರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ ಅಂಬೆಕಲ್ಲು, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ರಾಜು ಪಂಡಿತ್, ಮಾಧವ ಮಡಪ್ಪಾಡಿ , ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ರೊ.ಲತಾ ಮಧುಸೂದನ್, ಶ್ರೀ.ಶಾಫಿ ಕುತ್ತಮೊಟ್ಟೆ , ಪೂರ್ವಾಧ್ಯಕ್ಷರಾದ ರೊ.ಬಾಪು ಸಾಹೇಬ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜು ಪಂಡಿತ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ವಂದಿಸಿದರು. ರೋಟರಿ ಪ್ರೌಢಶಾಲಾ ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಯ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ , ಸ್ಪರ್ಧಾ ವಿಜೇತರಿಗೆ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು. ಕೋಶಾಧಿಕಾರಿಗಳಾದ ರಮೇಶ್ ಶೆಟ್ಟಿ,
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶಶಿಧರ ಎಂ.ಜೆ, ರೊ.ಬಾಪು ಸಾಹೇಬ್, ಮಾಧವ ಮಡಪ್ಪಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಲಿತಾಂಶ : ಸ್ಪರ್ಧೆಯ ವಿಜೇತರುಬುಲ್ ಬುಲ್ ವಿಭಾಗ
ರೋಟರಿ ಪ್ರಾಥಮಿಕ ಶಾಲೆ ಸುಳ್ಯ (ಪ್ರಥಮ),ಸೈಂಟ್ ಬ್ರಿಜೆಡ್ಸ್ (ದ್ವಿತೀಯ )ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ (ತೃತೀಯ) .

ಕಬ್ ವಿಭಾಗ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ (ಪ್ರಥಮ),ರೋಟರಿ ವಿದ್ಯಾ ಸಂಸ್ಥೆ (ದ್ವಿತೀಯ ),ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ (ತೃತೀಯ ).ಗೈಡ್ಸ್ ವಿಭಾಗರೋಟರಿ ವಿದ್ಯಾ ಸಂಸ್ಥೆ (ಪ್ರಥಮ),ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ (ದ್ವಿತೀಯ),ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ (ತೃತೀಯ ).

ಸ್ಕೌಟ್ಸ್ ವಿಭಾಗ ರೋಟರಿ ವಿದ್ಯಾಸಂಸ್ಥೆ (ಪ್ರಥಮ ),ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆ (ದ್ವಿತೀಯ) ,ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ (ತೃತೀಯ ).
ರೇಂಜರ್ ವಿಭಾಗ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ (ಪ್ರಥಮ) ಪಡೆದಿದ್ದಾರೆ.

ಸ.ಹಿ.ಪ್ರಾ.ಶಾಲೆ ದೇವರಕಾನದ ಮುಖ್ಯ ಶಿಕ್ಷಕರಾದ ಶ್ರೀಮತಿ ಪ್ರಮೀಳಾ ರಾಜ್, ಸ್ನೇಹ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ.ದೇವಿಪ್ರಸಾದ್ ನಿರ್ಣಾಯಕರಾಗಿ ಸಹಕರಿಸಿದರು.