ನೆಹರೂ ಸ್ಮಾರಕ ಕಾಲೇಜು, ಹಂಪಿ ಯುನಿವರ್ಸಿಟಿ ಮತ್ತು ಬಂಟಮಲೆ ಅಕಾಡೆಮಿಯ ಆಶ್ರಯದಲ್ಲಿ ಅಮರ ಸುಳ್ಯ ಸಂಗ್ರಾಮ-1837 ರಾಷ್ಟ್ರೀಯ ವಿಚಾರ ಸಂಕಿರಣ ಇಂದು ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಆರಂಭಗೊಂಡಿದೆ.
ಅಧ್ಯಕ್ಷತೆಯನ್ನು ಡಾ.ಕೆ.ವಿ.ಚಿದಾನಂದರು ವಹಿಸಿದ್ದಾರೆ. ಹಂಪಿ ಯುನಿವರ್ಸಿಟಿ ಉಪಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಕುಲಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜೆ ಎನ್ ಯು ನಿವೃತ್ತ ಪ್ರಾಧ್ಯಾಪಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರ ಕ್ರಾಂತಿ ನೆನಪಿನ ಕತ್ತಿ ಅನಾವರಣ ಮಾಡಿದರು. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾದ ಶಾಸಕಿ ಕು.ಭಾಗೀರಥಿ ಮುರುಳ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ತಹಶೀಲ್ದಾರ್ ಜಿ. ಮಂಜುನಾಥ್, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇದರ ಕುಲಸಚಿವರು ಹಿರಿಯ ಪ್ರಾಧ್ಯಾಪಕರಾದ ಡಾ. ವಿಜಯ್ ಪೂಣಚ್ಚ ತಂಬಂಡ, ಪ್ರಸಾರಾಂಗ ನಿರ್ದೇಶಕ ಡಾ.ಮಾಧವ ಪೆರಾಜೆ ಉಪಸ್ಥಿತರಿದ್ದಾರೆ.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾl ರುದ್ರಮೂರ್ತಿ, ಶಿಕ್ಷಕ ರಕ್ಷಕ ಕ್ಷೇಮಾಭಿವೃದ್ಧಿ ಅಧಿಕಾರಿ ರತ್ನಾವತಿ, ಡಾl ಮಮತಾ, ಸಂಜೀವ ಕುದ್ಪಾಜೆ, ಡಾ.ಅನುರಾಧ ಕುರುಂಜಿ, ಎ.ಕೆ ಹಿಮಕರ್ ವೇದಿಕೆಯಲ್ಲಿದ್ದಾರೆ.