ವೇದಾವತಿಯವರು ಸರಳ ಜೀವನಕ್ಕೆ ಮಾದರಿ : ಎಂ.ಬಿ.ಎಸ್.
ಮೆಸ್ಕಾಂ ವಿಶ್ರಾಂತ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್ ಚಂದ್ರಶೇಖರ ಧರ್ಮಪತ್ನಿ ಶ್ರೀಮತಿ ವೇದಾವತಿ ಕೆದಂಬಾಡಿ ಯವರು ಆ.21ರಂದು ನಿಧನರಾಗಿದ್ದು ಅವರ ವೈಕುಂಠ ಸಮಾರಾಧನೆ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವು ಸೆ.2 ರಂದು ಸುಳ್ಯ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಎಂ.ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವರವರು ನುಡಿ ನಮನ ಸಲ್ಲಿಸಿ, “ವೇದಾವತಿಯವರು ಯಾವುದೇ ಆಡಂಬರವಿಲ್ಲದೆ ಸರಳ ಜೀವನ ನಡೆಸಲು ಸಾಧ್ಯ ಎಂಬುದನ್ನು ಅವರ ಜೀವನದ ಶೈಲಿಯಿಂದ ನಾವು ಕಂಡಿದ್ದೇವು ಅವರ ಸರಳತೆ ಆದರ್ಶಗಳು ಸಮಾಜಕ್ಕೆ ಮಾದರಿಯಾಗಬೇಕು” ಎಂದು ಹೇಳಿದರು.
ಹಾಸನದ ಹಿರಿಯ ಚೇತನ ಮುದ್ದೇ ಗೌಡ ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮೃತರ ಪತಿ ಕೆ ಎಸ್ ಚಂದ್ರಶೇಖರ್,ಮಕ್ಕಳಾದ ತೇಜಸ್ವಿ ಕೆದಂಬಾಡಿ, ಡಾ.ರಕ್ಷಿತ್ ಕೆದಂಬಾಡಿ, ಸೌರಭ ತೇಜಸ್ವಿಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ತೇಜ ಕಿರಣ್ ನಿರ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು