500 ಅಜೀವ ಸದಸ್ಯತ್ವದ ಗುರಿ: ಅಧ್ಯಕ್ಷ ಸುಧಾಕರ ರೈ ವಿಶ್ವಾಸ
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ(ವರ್ತಕರ ಸಂಘ) ಇದರ ವಾರ್ಷಿಕ ಮಹಾಸಭೆ ಸೆ.3 ರಂದು ಸುಳ್ಯ ಅಂಬಟೆಡ್ಕದಲ್ಲಿ ರುವ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಹಿರಿಯ ವರ್ತಕರಾದ ಸುಂದರೇಶ ಭಟ್ ಜಾಲ್ಸೂರು, ಕೆ ಎಸ್ ಗೋಪಾಲಕೃಷ್ಣ (ಗೋಪಾಲ ಸ್ಟುಡಿಯೋ) ಬಿಎಂಎ ವೆಜಿಟೇಬಲ್ಸ್ ನ ಬಿ.ಎಂ ಅಬೂಬಕ್ಕರ್ ಹಾಜಿ, ಪಾತಿಕ್ಕಲ್ಲು ಇಂಡಸ್ಟ್ರೀಸ್ ಮಾಲಕ ಪದ್ಮನಾಭ ಪಾತಿಕ್ಕಲ್ಲು, ಶೀತಲ್ ಹೊಟೇಲ್ ಮಾಲಕ ಗಣಪ ಸಾಲಿಯಾನ್ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರಾದ ಕೊಡಿಯಾಲಬೈಲ್ ವಿಮುಕ್ತಿ ಧಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುವ, ಭಾರತ್ ಆಗ್ರೋದಲ್ಲಿ ಹಲವಾರು ವರ್ಷಗಳಿಂದ ಉದ್ಯೋಗಿಯಾಗಿರುವ ರಾಮಣ್ಣ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಡಿ.ಎಸ್ ಗಿರೀಶ್ ವಾಚಿಸಿದರು.
ಲೆಕ್ಕಪತ್ರವನ್ನು ಕೋಶಾಧಿಕಾರಿ ಹೇಮಂತ ಕಾಮತ್ ಲೆಕ್ಕಪತ್ರವನ್ನು ಮಂಡಿಸಿದರು.
ಅಧ್ಯಕ್ಷ ಸುಧಾಕರ ರೈ ಮಾತನಾಡಿ, “ಸುಳ್ಯದ ವರ್ತಕರ ಸಂಘ ಬಹಳ ಉತ್ತಮವಾಗಿ ಬೆಳೆಯುತ್ತಿದೆ ಈಗಾಗಲೇ 380 ಅಜೀವ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಸಂಘವಾಗಿದೆ ಮುಂದೆ ಸದಸ್ಯರ ಸಂಖ್ಯೆ 500 ಕ್ಕೆ ತಲುಪಿಸುವ ಗುರಿಯಿದೆ ಇದಕ್ಕೆ ಎಲ್ಲಾ ವರ್ತಕರ ಸಹಕಾರ ಬೇಕು ಎಂದವರು ಹೇಳಿದರು.
ಕಾರ್ಯದರ್ಶಿ ಡಿ.ಎಸ್ ಗಿರೀಶ್ ಸ್ವಾಗತಿಸಿದರು.
ಕೋಶಾಧಿಕಾರಿ ಹೇಮಂತ ಕಾಮತ್ ಧನ್ಯವಾದ ಸಮರ್ಪಣೆ ಮಾಡಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಪಿ, ಸಿಎ ಗಣೇಶ ಭಟ್ ಪಿ,ಅಬ್ದುಲ್ ಹಮೀದ್ ಜನತಾ,ಆದಂ ಕುಂಞಿ ಕಮ್ಮಾಡಿ,ಪ್ರಭಾಕರನ್ ನಾಯರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರ್ತಕರ ಸಮಿತಿ ಪದಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಾಲಿ ಅಧ್ಯಕ್ಷರಾಗಿರುವ ಸುಧಾಕರ ರೈ ತಂಡವನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪಿ .ಬಿ ಸುಧಾಕರ ರೈ ಉಪಾಧ್ಯಕ್ಷರಾಗಿ ರಾಮಚಂದ್ರ ಪಿ ಭಾರತ್ ಆಗ್ರೊ, ಸಿಎ ಗಣೇಶ ಭಟ್ ಪಿ,ಅಬ್ದುಲ್ ಹಮೀದ್ ಜನತಾ,ಆದಂ ಹಾಜಿ ಕಮ್ಮಾಡಿ,ಪ್ರಭಾಕರನ್ ನಾಯರ್,ಪ್ರಧಾನ ಕಾರ್ಯದರ್ಶಿ ಯಾಗಿ ಡಿ ಎಸ್ ಗಿರೀಶ್,ಕೋಶಾಧಿಕಾರಿ ಹೇಮಂತ್ ಕಾಮತ್ ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ರಹಿಮಾನ್ ಎಸ್ ವೈ,ಲತಾಪ್ರಸಾದ್ ಕುದ್ಪಾಜೆ,ನಿರ್ದೇಶಕರಾಗಿ ಎಂ ಸುಂದರ ರಾವ್,ಜಗನ್ನಾಥ ರೈ ಪಿ,ರಮೇಶ್ ಶೆಟ್ಟಿ, ಧರ್ಮಪಾಲ ಕುರುಂಜಿ,ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ,ಅನೂಪ್ ಕೆ ಜೆ,ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್, ಯು.ಪಿ ಬಶೀರ್, ಶ್ಯಾಂಗ್ ಸಿಂಗ್,ಆದಿತ್ಯಕೃಷ್ಣ,ಮಂಜುನಾಥ್ ರೈ ತಂಡದಲ್ಲಿದ್ದಾರೆ.